
ಬಂಗ್ಲೆಗುಡ್ಡೆ ಎರಡನೇ ವಾರ್ಡ್ ಪರನೀರ್ ಎಂಬಲ್ಲಿ 15-20 ದಿನಗಳಿಂದ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ಪುರಸಭಾ ಸದಸ್ಯೆ ಪ್ರತಿಮಾ ರಾಣೆಯವರು ಜೂನ್ 2 ರಂದು ಕಾರ್ಕಳ ಪುರಸಭೆಯಲ್ಲಿ ಪ್ರತಿಭಟಿಸಿ ಈ ಸಮಸ್ಯೆಯನ್ನು ಕೂಡಲೆ ಬಗೆಹರಿಸುವಂತೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
















































