
ದಿ ಗ್ರೇಟ್ ಮರಾಠ ಟ್ರೋಫಿ ಕಾರ್ಕಳ ಇದರ ಸಾರಥ್ಯದಲ್ಲಿ ದಿ ಗ್ರೇಟ್ ಮರಾಠ ಟ್ರೋಫಿ 2025 ದಿ. 01-02- 2025 ರಿಂದ 02-02-2025 ನೇ ಶನಿವಾರ ಹಾಗೂ ಭಾನುವಾರ ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ಉಡುಪಿ, ಮಂಗಳೂರು, ಕಾಸರಗೋಡು, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕ್ಷತ್ರಿಯ ಮರಾಠ ಸಮಾಜದ ಪುರುಷರ, ಮಹಿಳೆಯರ, ಮತ್ತು ಮಕ್ಕಳಿಗಾಗಿ ಕ್ರಿಕೆಟ್ ಹಾಗೂ ತ್ರೊಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ. ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವು ಮಿಯ್ಯಾರು, ಡಿ.ಆರ್. ಸುವರ್ಣ ಅಡಿಟೊರಿಯಂ ಸಭಾಭವನದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಪ್ರಕಾಶ್ ರಾವ್ ಕವಡೆ, ಸಂತೋಷ್ ರಾವ್ ಕವಡೆ, ಕೀರ್ತನ್ ಕುಮಾರ್ ಲಾಡ್, ರಮಾನಾಥ್ ರಾವ್ ತಾಮಸ, ಸಂತೋಷ್ ರಾವ್ ಲಾಡ್, ಚಿರಾಗ್ ರಾವ್,ಹರಿಶ್ಚಂದ್ರ ರಾವ್ ಮೋರೆ ,ಡಾ.ಪಲ್ಲವಿ ಕೀರ್ತನ್ ಕುಮಾರ್ ಲಾಡ್, ಡಾ.ಸುಮತಿ ರಾವ್ ಪವಾರ್, ರಾಜೇಶ್ವರಿ ರಾವ್ ತಮಾಸ ,ದಿಶಾ ರಾವ್ ಕವಡೆ,ಸತೀಶ್ ರಾವ್ ಪವಾರ್, ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ನಿಖಿಲ್ ರಾವ್ ನಿರೂಪಿಸಿ ಶಕುಂತಲಾ ರಾವ್ ವಂದನೆಗೈದರು.



