ಕಾರ್ಕಳ ಶಿಶುಪಾಲನಾ ಕೇಂದ್ರ ಕಾರ್ಕಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
“ಆಪ್ತ ಸಮಾಲೋಚನಾ ಕಟ್ಟಡ ಉದ್ಘಾಟನೆ ಮತ್ತು ವಿಶ್ವ ಮಹಿಳಾ ದಿನಾಚರಣೆ”

ಕಾರ್ಕಳ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ರಿ., ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ,ಕಾರ್ಕಳ ಶಿಶುಪಾಲನಾ ಕೇಂದ್ರ ಕಾರ್ಕಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ,”ಆಪ್ತ ಸಮಾಲೋಚನಾ ಕಟ್ಟಡ ಉದ್ಘಾಟನೆ ಮತ್ತು ವಿಶ್ವ ಮಹಿಳಾ ದಿನಾಚರಣೆ” ಏಪ್ರಿಲ್ 4ರಂದು ಶನಿವಾರ, ಪೂರ್ವಾಹ್ನ 10 ಗಂಟೆಗೆ ಕಾರ್ಕಳ ತಾಲೂಕು ಮಹಿಳಾ ಒಕ್ಕೂಟ ಸಭಾಂಗಣ ಮೆಸ್ಕಾಂ ರೋಡ್ ಬಂಡಿಮಠ ಕಾರ್ಕಳ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟಕರಾಗಿ, ಉಸ್ತುವಾರಿ ಸಚಿವರಾದ ಲಕ್ಷ್ಮಿ .ಆರ್ ಹೆಬ್ಬಾಳ್ಕರ್, ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಶಾಸಕರಾದ ವಿ. ಸುನಿಲ್ ಕುಮಾರ್ ವಹಿಸಿಕೊಳ್ಳಲಿದ್ದಾರೆ.






















































