
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಕಾರ್ಕಳ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಾರ್ಕಳ ತಾಲೂಕಿನ ಜನ ಜಾಗೃತಿ ವೇದಿಕೆ ತ್ರೈಮಾಸಿಕ ಸಭೆ ಕಾರ್ಕಳ ಯೋಜನಾ ಕಚೇರಿಯಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷರಾದ ಉದಯ್ ಕುಮಾರ್ ಹೆಗ್ಡೆ ವಹಿಸಿದ್ದರು. ಉದ್ಘಾಟನೆಯನ್ನು ಜನಜಾಗೃತಿ ಸದಸ್ಯರಾದ ಮಿತ್ರ ಪ್ರಭ ಹೆಗ್ಡೆ ಹಾಗು ಸಾವಿತ್ರಿ ಮನೋಹರ್ ರವರು ನೆರವೇರಿಸಿದರು.
ಅಕ್ಟೋಬರ್ 7 ರಂದು ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ಗಾಂಧಿ ಸ್ಮೃತಿ ಕಾರ್ಯಕ್ರಮಕ್ಕೆ ಪೂರ್ವ ತಯಾರಿಯ ಬಗ್ಗೆ, ಜನಜಾಗೃತಿ ಕಾರ್ಯಕ್ರಮಗಳ ಆಯೋಜನೆ ಬಗ್ಗೆ, ನವ ಜೀವನ ಸಮಿತಿಗಳ ಬಲಪಡಿಸುವಿಕೆ ಬಗ್ಗೆ ಚರ್ಚಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಕಮಲಾಕ್ಷ ನಾಯಕ್, ಹರಿಶ್ಚಂದ್ರ ತೆಂಡೂಲ್ಕರ್, ತ್ರಿವಿಕ್ರಂ ಕಿಣಿ, ವೃಷಭ ರಾಜ್ ಕಡಂಬ ಜನಜಾಗೃತಿ ಯೋಜನಾಧಿಕಾರಿಯಾದ ಗಣೇಶ್ ಆಚಾರ್ಯ, ತಾಲೂಕ್ ಯೋಜನಾಧಿಕಾರಿಯಾದ ಬಾಲಕೃಷ್ಣ ಹಿರಿಂಜರವರು, ತಾಲೂಕಿನ ಜನಜಾಗೃತಿ ಸದಸ್ಯರು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.



















