22.3 C
Udupi
Tuesday, February 3, 2026
spot_img
spot_img
HomeBlogಕಾರ್ಕಳ: ಡಿ.13ರಂದು ಕೆ . ಎಂ ಎಸ್ ಶಿಕ್ಷಣ ಸಂಸ್ಥೆಯ "42ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ"

ಕಾರ್ಕಳ: ಡಿ.13ರಂದು ಕೆ . ಎಂ ಎಸ್ ಶಿಕ್ಷಣ ಸಂಸ್ಥೆಯ “42ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ”

ಕಾರ್ಕಳ: ಡಿಸೆಂಬರ್ 13ರಂದು ಕಾರ್ಕಳದ ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ನಡೆಯಲಿದೆ.

ಸಂಸ್ಥೆಯ ಅಧ್ಯಕ್ಷರಾದ ಕೆ ಎಸ್ ಇಮ್ತಿಯಾಜ್ ಅಹಮದ್ ಅವರು ಈ ಕುರಿತು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಮತ್ತು ಉದ್ಯೋಗವಕಾಶಗಳಲ್ಲಿ ಸಮಾನ ಅವಕಾಶ ಸಿಗಬೇಕು ಎಂಬ ಧ್ಯೇಯದಿಂದ ಆರಂಭವಾದ ಕೆಎಂಇಎಸ್ ಶಿಕ್ಷಣ ಸಂಸ್ಥೆಯು ತನ್ನ 42ನೇ ವಾರ್ಷಿಕೋತ್ಸವ ಸಡಗರಕ್ಕೆ ಸಜ್ಜಾಗಿದೆ.

ಹಿರಿಯರಾದ ಹಾಜಿ ಪಿ.ಎಂ ಖಾನ್, ಕೆ ಎಸ್ ನಜೀರ್ ಅಹಮ್ಮದ್ ಮತ್ತು ಹಾಜಿ ಎ. ಎಸ್ ರಶೀದ್ ಹೈದರ್ ಈ ತ್ರಿಮೂರ್ತಿಗಳ ಕನಸುಗಳ ಫಲವಾಗಿದ್ದು ಕೆ.ಎಸ್ ಮೊಹಮ್ಮದ್ ಮಸೂದ್ ಅವರ ನಿರಂತರ ಮಾರ್ಗದರ್ಶನ ಹಾಗೂ ಕೆ ಎಸ್ ನಿಸಾರ್ ಅಹಮದ್ ಅವರ ನಿಸ್ವಾರ್ಥ ಸೇವೆಯಿಂದ ಸಂಸ್ಥೆಯು ಇಂದು ದೊಡ್ಡ ಆಲದ ಮರದಂತೆ ಬೆಳೆದು ನಿಂತಿದೆ ಎಂದು ಹೇಳಿದರು.

ವಾರ್ಷಿಕೋತ್ಸವದ ಅಂಗವಾಗಿ ಇಂದು ಬ್ಯಾನರ್ ರಿಲೀಸಿಂಗ್ ಕಾರ್ಯಕ್ರಮ ಹಾಗೂ ಡಿ. 10ರಂದು ವಿಜ್ಞಾನ ಮಾದರಿಗಳ ಅನ್ವೇಷಣಾ ಪ್ರದರ್ಶನ ಮತ್ತು ವ್ಯಾಪಾರ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ. ಡಿ.13ರಂದು ಸಂಸ್ಥೆಯ ವಾರ್ಷಿಕೋತ್ಸವ ಮಧ್ಯಾಹ್ನ 3:30ರ ವೇಳೆಗೆ ಜರುಗಲಿದ್ದು ವಾರ್ಷಿಕೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಈ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಎಸ್ ಮೊಹಮ್ಮದ್ ಮಸೂದ್ ಅವರು ವಹಿಸಲಿದ್ದು ತಹಶೀಲ್ದಾರ್ ಶ್ರೀ ಪ್ರದೀಪ್ ಆರ್, ಅಜೆಕಾರು ಪದ್ಮ ಗೋಪಾಲ, ಎಜುಕೇಶನ್ ಟ್ರಸ್ಟ್ ಜ್ಞಾನ ಸುಧಾ ವಿದ್ಯಾಸಂಸ್ಥೆಯ PRO ಜ್ಯೋತಿ ಪದ್ಮನಾಭ ಭಂಡಿ ಹಾಗೂ ಮತ್ತಿತರರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page