ಸ್ವಾತಂತ್ರ್ಯವೆಂಬುವುದು ಉಚಿತವಲ್ಲ,ಅದೊಂದು ಜವಾಬ್ದಾರಿ: ಡಾ.ಶ್ರೀನಿವಾಸ್ ದೇಶ್ ಪಾಂಡೆ

ಗಣಿತನಗರ : ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳಿಗೆ ನಾವು ಧನ್ಯವಾದ ಹೇಳುವ ಅವರ ಚಿರಸ್ಮರಣೆ ಗೈಯ್ಯುವ ಶುಭದಿನ. ಸ್ವಾತಂತ್ರö್ಯವೆAಬುದು ಉಚಿತವಾಗಿ ದೊರೆತುದಲ್ಲ. ಅದೊಂದು ಜವಾಬ್ದಾರಿಯ ಸಂಕೇತ ಎಂದು ಪದ್ಮಶ್ರೀ ಡಾ.ಎಂ. ಎಮ್ ಜೋಷಿ ಸೇವಾಪ್ರಶಸ್ತಿ ಪುರಸ್ಕೃತ ನೇತ್ರತಜ್ಞ ಡಾ.ಶ್ರೀನಿವಾಸ್ ದೇಶಪಾಂಡೆ ಹೇಳಿದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರುಗಿದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪಿ.ಆರ್.ಒ ಜ್ಯೋತಿಪದ್ಮನಾಭ್ ಭಂಡಿ. ಪಿ.ಯು. ಉಪಪ್ರಾಂಶುಪಾಲರುಗಳಾದ ಸಾಹಿತ್ಯ, ಶ್ರೀಮತಿ ಉಷಾ ರಾವ್ ಯು, ಜ್ಞಾನಸುಧಾ ಆಂಗ್ಲಮಾಧ್ಯಮಪ್ರೌಢಶಾಲಾ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ, ಲೆಫ್ಟಿನೆಂಟ್ ಮಂಜುನಾಥ್ ಮುದೂರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸೌಜನ್ಯ ಹೆಗ್ಡೆ, ರೇಶ್ಮಾ ಸಾಲಿಸ್, ಕಿರಣ್ ಕುಮಾರ್ ಮತ್ತು ದರ್ಶನ್ ಕುಮಾರ್ ಉಪಸ್ಥಿತರಿದ್ದರು.
ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ದಿನೇಶ್ ಎಂ ಕೊಡವೂರ್ ವಂದಿಸಿ, ಜೀವಶಾಸ್ತ್ರ ಉಪನ್ಯಾಸಕ ಪ್ರಸಾದ್ ಆಚಾರ್ಯ ನಿರೂಪಿಸಿ ಸ್ವಾಗತಿಸಿದರು.