
ಕಾರ್ಕಳ: ಕಾರ್ಕಳ ತಾಲೂಕಿನಲ್ಲಿ ಒಂದಾದ ಮೇಲೆ ಒಂದರಂತೆ ನಿರಂತರವಾಗಿ ಗೋ ಕಳ್ಳತನ ಹಾಗೂ ಹತ್ಯೆ ನಡೆಯುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಕಾರ್ಕಳ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್, ಭಜರಂಗದಳದ ಕಾರ್ಯಕರ್ತರು ಕಾರ್ಕಳ ತಾಲೂಕು ಕಚೇರಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.
ಕಾರ್ಕಳ ಶಿರ್ಲಾಲು ಗ್ರಾಮದಲ್ಲಿ ಮೊನ್ನೆಯಷ್ಟೇ ಹೈನುಗಾರಿಕೆ ನಡೆಸಿ ಜೀವನ ನಡೆಸುತ್ತಿದ್ದ ಮಹಿಳೆಯೊಬ್ಬರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿ ದನಗಳನ್ನು ಕದ್ದುಕೊಂಡು ಹೋಗಿದ್ದು ಇದೀಗ ನಲ್ಲೂರು ಗ್ರಾಮದ ಆಶ್ರಫ್ ಆಲಿಯವರ ಮನೆಯಲ್ಲಿ ಅಕ್ರಮ ಗೋಹತ್ಯೆಯ ಜೊತೆಗೆ 200 ಕೆಜಿ ದನದ ಮಾಂಸ ಪತ್ತೆಯಾಗಿದೆ.
ಪೊಲೀಸರ ಭಯವಿಲ್ಲದೆ ದುಷ್ಕರ್ಮಿಗಳು ಮನೆಯಲ್ಲಿಯೇ ಕಸಾಯಿಖಾನೆಗಳನ್ನು ನಿರ್ಮಿಸಿ ಗೋವುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಅಕ್ರಮ ದಂಧೆ ಆರಂಭಿಸಿದ್ದಾರೆ. ಇದೇ ರೀತಿ ಕಾರ್ಕಳದ ಇತರ ಹಲವು ಕಡೆ ಇಂತಹ ತಂಡ ಯಾವುದೇ ಭಯವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು ಇಂತವರನ್ನು ತಕ್ಷಣವೇ ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಪೋಲಿಸ್ ಇಲಾಖೆಯು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ಇಂತಹ ಕೃತ್ಯಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕಿದ್ದು ಇಲ್ಲದೆ ಇದ್ದಲ್ಲಿ ಇದರ ವಿರುದ್ಧ ಇಡೀ ಹಿಂದೂ ಸಮಾಜ, ಹಿಂದೂ ಸಂಘಟನೆಗಳು ಹೋರಾಟ ಮಾಡುವ ಅನಿರ್ವಾರ್ಯತೆ ಬರಲಿದೆ.
ಕೋಮು ಸಾಮರಸ್ಯ ಕದಡುವ ಮುನ್ನ ಈ ಕೂಡಲೇ ತಾಲೂಕಿನ ದಂಡಾಧಿಕಾರಿಗಳಾದ ತಾವು ಮಧ್ಯ ಪ್ರವೇಶಿಸಿ ಅಶ್ರಫ್ ಆಲಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಿಂದೂ ಸಂಘಟನೆಗಳಾದ ನಾವು ತಮ್ಮಲ್ಲಿ ಆಗ್ರಹಪೂರಕವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದ್ದಾರೆ.




















































