26 C
Udupi
Monday, March 9, 2026
spot_img
spot_img
HomeBlogಕಾರ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ, ಸೌಹಾರ್ದ ಇಫ್ತಾರ ಕೂಟ

ಕಾರ್ಕಳ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ, ಸೌಹಾರ್ದ ಇಫ್ತಾರ ಕೂಟ

ಉಪವಾಸದ ತಿಂಗಳು ಶುಭವನ್ನುಂಟು ಮಾಡಲಿ: ಉದಯ ಶೆಟ್ಟಿ ಮುನಿಯಾಲು

ಸರ್ವಧರ್ಮವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ, ಇಫ್ತಾರ ಕೂಟ,: ಶುಭದ ರಾವ್

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಸೌಹಾರ್ಧ ಇಫ್ತಾರ್ ಕೂಟವು ಕಾರ್ಕಳ ಸಾಲ್ಮಾರದ ಜಾಮೀಯಾ ಮಸೀದಿಯ ಶಾದಿ‌ ಮಹಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಕಳ ಬಂಗ್ಲೆಗುಡ್ಡೆಯ ತೈಬಾ ಗಾರ್ಡನ್ ಪ್ರಾಂಶುಪಾಲರಾದ ಮೌಲಾನ ಅಹ್ಮದ್ ಶರೀಪ್ ಅವರು ಮಾತನಾಡಿ ಇಂದು ಜಗತ್ತು ನೆನಪಿಟ್ಟುಕೊಳ್ಳು ಅತ್ಯಾಧುನಿಕ ಅವಿಷ್ಕಾರಗಳನ್ನು ಸಂಶೋದಿಸಿದವರು ತಮ್ಮ ಜೀವನದ ಸಂದ್ಯಾಕಾಲದಲ್ಲಿ ಮನಃಶಾಂತಿಗಾಗಿ ಧರ್ಮದ ಪಾಲನೆಗೆ ಮೊರೆ ಹೋದರು, ನಾವೆಲ್ಲರೂ ನಮ್ಮ ನಮ್ಮ ಧರ್ಮಗಳನ್ನು ಪಾಲಿಸುತ್ತಾ ಶಾಂತಿ ಸೌಹಾರ್ದತೆಗೆ ಮಹತ್ವ ನೀಡೋಣ ಎಂದರು.

ನಕ್ರೆ ಚರ್ಚ್ ಧರ್ಮಗುರುಗಳಾದ ವಂದನೀಯ ಪಾದರ್ ಲೂಯಿಸ್ ಡೇಸಾ ಅವರು ಮಾತನಾಡಿ ನಾವೆಲ್ಲರೂ ದೇವರ ಮಕ್ಕಳು, ಜಾತಿ ಧರ್ಮಗಳ ಭೇದವು ದೇವರ ಮಕ್ಕಳದಾ ನಮ್ಮನ್ನು ಒಡೆಯದಂತೆ ಎಲ್ಲರೂ ಜಾಗೃತೆವಹಿಸೋಣ ಎಂದರು. ಹಿರಿಯ ನ್ಯಾಯವಾದಿ ಕಾಂಗ್ರೆಸ್ ಮುಖಂಡರಾದ ಶೇಖರ ಮಡಿವಾಳರವರು ಮಾತನಾಡಿ ಜಾಗತಿಕವಾಗಿ ಯುದ್ದದ ಕಾರ್ಮೋಡ ಕವಿದಿದ್ದು ಇನ್ನು ಮನನ ಮುಂದೆಯಾದರೂ ಜಗತ್ತಜನಲ್ಲಿ ಶಾಂತಿ ನೆಲೆಸುವಂತಾಗಲಿ ಎಂದು ಹಾರೈಸಿದರು. ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು,ರವರು ಮಾತನಾಡಿ ಸಮಾನತೆಯನ್ನು ಸಾರಿದ ಸಂತ ಶಿಶುನಾಳ ಶರೀಪರ ಜಯಂತಿಯ ಪುಣ್ಯ ದಿನದಂದು ಎಲ್ಲಾ ಮತ ಧರ್ಮಗಳ ಜನರು ಇಂದು ಒಂದಾಗಿದ್ದೇವೆ, ಎಲ್ಲರಿಗೂ ಉಪವಾಸದ ತಿಂಗಳು ಶುಭವನ್ನುಂಟು ಮಾಡಲಿ ಎಂದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕವು ಸರ್ವ ಧರ್ಮವನ್ನೂ ಒಗ್ಗೂಡಿಸಿ ಸೌಹಾರ್ದತೆಯನ್ನು ಸಾರುವ ನಿಟ್ಟಿನಲ್ಲಿ ಸೌಹಾರ್ದ ಇಪ್ತಾರ್ ಕೂಟ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.

ರಾಜ್ಯ ನಾರಾಯಣ ಗುರು ಅಭಿವೃದ್ಧಿ ‌ನಿಗಮದ ಅಧ್ಯಕ್ಷರಾದ ಮಂಜುನಾಥ ‌ಪೂಜಾರಿ ಮುದ್ರಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷರಾದ ಎಂ.ಎ.ಗಫೂರ್ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶೇಖ್ ವಾಹಿದ್ ದಾವೂದ್ ಇವರುಗಳಿಗೆ ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ವತಿಯಿಂದ ಶುಭಾನ್ ಮತ್ತು ಅಕ್ಬರ್ ಅವರ ವೈದ್ಯಕೀಯ ಚಿಕಿತ್ಸೆಗೆ ಧನ ಸಹಾಯದ ನೆರವನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಫುದ್ದೀನ್ ಶೇಖ್, ಮುಸ್ಲಿಂ ಒಕ್ಕೂಟ ಕಾರ್ಕಳ ಘಟಕದ ಅಧ್ಯಕ್ಷ ಮೊಹ್ಮದ್ ಗೌಸ್, ಆಶ್ಫಕ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎಂ.ಪಿ. ಮೊಯಿದಿನಬ್ಬ ಇನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ
ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶೇಖ್ ಶಭೀರ್ ಮಿಯ್ಯಾರು ನಿರೂಪಿಸಿ ಅಬ್ದುಲ್ ಸಾಣೂರು ಅವರು ಧನ್ಯವಾದವಿತ್ತರು.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page