28.3 C
Udupi
Tuesday, February 3, 2026
spot_img
spot_img
HomeBlogಕಾರ್ಕಳ : ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಗೆ ಲಯನ್ಸ್‌ ಸಿಟಿಯಿಂದ ಇನ್ವರ್ಟರ್‌ ಕೊಡುಗೆ

ಕಾರ್ಕಳ : ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಗೆ ಲಯನ್ಸ್‌ ಸಿಟಿಯಿಂದ ಇನ್ವರ್ಟರ್‌ ಕೊಡುಗೆ

ಕಾರ್ಕಳ : ಅಂತರಾಷ್ಟ್ರೀಯ ಲಯನ್ಸ್‌ ಜಲ್ಲೆ 317ಸಿ ಪ್ರಾಂತೀಯ ಅಧ್ಯಕ್ಷರು ಮತ್ತು ವಲಯಾಧ್ಯಕ್ಷರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಕರಿಯಕಲ್ಲು ಸಾರ್ವಜನಿಕ ರುದ್ರಭೂಮಿಗೆ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ವತಿಯಿಂದ ಇನ್ವರ್ಟರ್‌ ಸಮಾಜ ಸೇವಕರು ಮತ್ತು ರುದ್ರಭೂಮಿ ನಿರ್ವಾಹಕರಾದ ಪ್ರಕಾಶ್‌ ರಾವ್‌ ಅವರಿಗೆ ಹಸ್ತಾಂತರಿಸಲಾಯಿತು.

ರಾತ್ರಿ ಹೊತ್ತಿನ ರುದ್ರಭೂಮಿ ನಿರ್ವಹಣೆ ಕುರಿತಂತೆ ಬಹಳ ಬಾರಿ ಪ್ರಕಾಶ್‌ ರಾವ್‌ ಅವರು ಮನವಿ ಮಾಡಿಕೊಂಡಿರುವ ಹಿನ್ನಲೆಯಲ್ಲಿ ವಿದ್ಯುತ್‌ ಇಲ್ಲದ ಸಮಯದಲ್ಲಿ ಉಪಯೋಗವಾಗಲೆಂದು ಇನ್ವರ್ಟರ್‌ ನೀಡಲಾಯಿತು. ಈ ಸಂದರ್ಭದಲ್ಲಿ ಎಂಜೆಎಫ್ ರಂಜನ್‌ ಕಲ್ಕುರಾ ಅವರು ಬೀದಿಬದಿಯ ವ್ಯಾಪಾರಿಗಳಿಗೆ ಉಪಯೋಗವಾಗಲಿ ಎಂದು ನೆರಳು ಯೋಜನೆಯಡಿ 2ದೊಡ್ಡ ಕೊಡೆಯನ್ನು ಹಸ್ತಾಂತರಿಸಿದರು.

ಹೊಟೇಲ್‌ ಕಟೀಲು ಇಂಟರ್‌ನ್ಯಾಶನಲ್‌ನಲ್ಲಿ ನಡೆದ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಪ್ರಾಂತೀಯ ಅಧ್ಯಕ್ಷರಾದ ಎಂಜೆಎಫ್‌ ಗುರುಪ್ರಸಾದ್‌ ಶೆಟ್ಟಿಯವರು, ಸೇವಾ ಮನೋಭಾವದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪಂಧಿಸುತ್ತಿರುವ ಲಯನ್ಸ್‌ ಸಿಟಿ ಇನ್ನಷ್ಟು ಸಮಾಜಸೇವೆಯಲ್ಲಿ ಭಾಗಿಯಾಗಲಿ, ಸಮಜಮುಖಿ ಕೆಲಸಗಳನ್ನು ಮಾಡಲಿ ಎಂದು ತಿಳಿಸಿದರು. ವಲಯಾಧ್ಯಕ್ಷರು ಎಂಜೆಎಫ್‌ ದಿನೇಶ್‌ ಕುಮಾರ್‌ ವಲಯ ಸಭೆ ನಡೆಸಿ ವಲಯದಲ್ಲಿ ಬರುವ ನಾಲ್ಕು ಕ್ಲಬ್‌ಗಳ ಚಟುವಟಿಕೆಗಳನ್ನು ಗಮನಿಸಿ, ಎಲ್ಲರಿಗೂ ಪ್ರಮಾಣಪತ್ರ ವಿತರಿಸಿದರು.

ಅಧ್ಯಕ್ಷತೆಯನ್ನು ಲಯನ್ಸ್‌ ಸಿಟಿ ಅಧ್ಯಕ್ಷರಾದ ಗೋಪಾಲ್‌ ಅಂಚನ್‌ ವಹಿಸಿದ್ದರು. ಪ್ರಾಂತೀಯ ಕಾರ್ಯದರ್ಶಿ ಸುರೇಶ್‌ ಶೆಟ್ಟಿ ಶುಭ ಹಾರೈಸಿದರು.ಪ್ರಾರ್ಥನೆಯನ್ನು ಪ್ರಶಾಂತ್‌ ಸಾಲ್ಯಾನ್‌ ನೆರವೇರಿಸಿ, ಕಾರ್ಯದರ್ಶಿ ನಿಹಾಲ್‌ ಶೆಟ್ಟಿ ಜಕ್ಕನ್ಮಕ್ಕಿ ಸ್ವಾಗತಿಸಿದರು. ಕೋಶಾಧಿಕಾರಿ ಶಾಲಿನಿy ಸುವರ್ಣ ವಂದಿಸಿ, ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್‌ ನಿರೂಪಿಸಿದರು. ನಯನ ನಾಯಕ್‌, ಕೆ. ಪಿ. ಪದ್ಮಾವತಿ, ವೀಣಾ ಶೆಟ್ಟಿ ಸಹಕರಿಸಿದರು. ಮೂವರು ನೂತನ ಸದಸ್ಯರು ಈ ಸಂದರ್ಭದಲ್ಲಿ ಸೇರ್ಪಡೆಗೊಂಡರು. ಯೋಗೇಶ್‌ ನಾಯಕ್‌, ಟಿ.ಕೆ. ರಘುವೀರ್‌, ರಘುನಾಥ್‌ ಕೆ.ಎಸ್‌, ಧರ್ಮರಾಜ್‌, ಧೀರಜ್‌ ಸೇರಿದಂತೆ ಪ್ರಾಂತ್ಯದ 12 ಕ್ಲಬ್ಬಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page