
ಕಾರ್ಕಳ: ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ (DySP) ಹುದ್ದೆಗೆ ಎಸ್. ವಿಜಯ್ ಪ್ರಸಾದ್ ನೇಮಕಗೊಂಡಿದ್ದು, ಅವರು ಅಧಿಕಾರ ಸ್ವೀಕರಿಸಿದ್ದಾರೆ.
ವಿಜಯ್ ಪ್ರಸಾದ್ ಅವರು 1998ರಲ್ಲಿ ಪೊಲೀಸ್ ಇಲಾಖೆಗೆ ಸಬ್ ಇನ್ಸ್‌ಪೆಕ್ಟರ್ ಆಗಿ ಪ್ರವೇಶಿಸಿದ ಅವರು ದಾವಣಗೆರೆ, ಭದ್ರಾವತಿ ಹಾಗೂ ಚಿಕ್ಕಮಗಳೂರು ಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ ಇನ್ಸ್‌ಪೆಕ್ಟರ್ ಹುದ್ದೆಗೆ ಪದೋನ್ನತಿ ಪಡೆದ ಬಳಿಕ ಹಾಸನ, ಹೊಳನರಸೀಪುರ, ಕುಶಾಲನಗರ, ಚಿಕ್ಕಮಗಳೂರು, ಅಂಕೋಲಾ ಮತ್ತು ಕಾರ್ಕಳದಲ್ಲೂ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಹಿಂದೆ ಕಾರ್ಕಳ ಡಿವೈಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದ ಅವರು ನಂತರ ಕಾರವಾರದ ಡಿ.ಸಿ.ಆರ್.ಬಿ ಘಟಕಕ್ಕೆ ವರ್ಗಾವಣೆಗೊಂಡಿದ್ದರು. ಬಳಿಕ ಬಂಟ್ವಾಳದಲ್ಲಿ ಡಿವೈಎಸ್‌ಪಿ ಆಗಿ ಕೆಲಸ ಮಾಡಿ, ಇದೀಗ ಮತ್ತೆ ಕಾರ್ಕಳ ಉಪವಿಭಾಗದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಂಗಳೂರು ಲೋಕಾಯುಕ್ತ ಘಟಕದಲ್ಲಿಯೂ ಕೆಲ ವರ್ಷ ಸೇವೆ ಸಲ್ಲಿಸಿದ್ದಾರೆ.






