27.7 C
Udupi
Thursday, March 5, 2026
spot_img
spot_img
HomeBlogಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ INRC3 ಕೆಟಗರಿ ದ್ವಿತೀಯ...

ಕಾರ್ಕಳದ ಚಿರಂತ್ ಜೈನ್ ಇವರಿಗೆ ರಾಷ್ಟ್ರೀಯ ಮಟ್ಟದ ಕಾರ್ ರೇಸ್ ನಲ್ಲಿ INRC3 ಕೆಟಗರಿ ದ್ವಿತೀಯ ಸ್ಥಾನ,ಓವರ್ ಆಲ್ ಭಾಗದಲ್ಲಿ ತೃತೀಯ ಸ್ಥಾನ

ತನ್ನ ಬಾಲ್ಯದ ದಿನಗಳಿಂದಲೇ Motorsports ನಲ್ಲಿ ಆಸಕ್ತಿ ಹೊಂದಿದ್ದ ಚಿರಂತ್ ಜೈನ್(25) 16ನೇ ವಯಸ್ಸಿನಲ್ಲಿಯೇ ತನ್ನ ಸಹೋದರ ಅಕ್ಷಯ್ ಕೆ ಜೈನ್ ರವರ ಮಾರ್ಗದರ್ಶನದಲ್ಲಿ IMSC (INDIAN MOTOR SPORTS CLUB) ಜೊತೆ MOTOR SPORTS ಇವೆಂಟ್ ನಲ್ಲಿ ಅಫೀಷಿಯಲ್ ಆಗಿ ಭಾಗವಹಿಸಿಕೊಂಡು ಬಂದಿದ್ದು , ತನ್ನ 18ನೇ ವಯಸ್ಸಿನಲ್ಲಿ 2018ರಲ್ಲಿ ಮೂಡುಬಿದಿರೆಯಲ್ಲಿ ನಡೆದ TSD Rally ಯಲ್ಲಿ ಮೊದಲ ಬಾರಿಗೆ ಭಾಗವಹಿಸಿ, ಕ್ಯಾಟಗರಿಯಲ್ಲಿ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. 2018 ರಿಂದ 2024ರ ವರೆಗೆ ಹಲವಾರು ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ TSD Rally ಗಳಲ್ಲಿ ಭಾಗವಹಿಸಿ ಉತ್ತಮ ಸ್ಥಾನವನ್ನೂ ಗಳಿಸಿರುತ್ತಾರೆ.

ಭಾರತದ ಉತ್ತಮ Rally ಕೋ ಡ್ರೈವರ್ MUSA SHERIF ಅವರಲ್ಲಿ ಕೋ ಡ್ರೈವಿಂಗ್ ಟ್ರೈನಿಂಗ್ ಪಡೆದುಕೊಂಡು 2024ರಲ್ಲಿ ಮೊದಲ INRC (INDIAN NATIONAL RALLY CHAMPIONSHIP) ನಲ್ಲಿ ಭಾಗವಹಿಸಿರುತ್ತಾರೆ. ಇದಲ್ಲದೆ 2024 ಡಿಸೆಂಬರ್ ನಲ್ಲಿ ನಡೆದ 48ನೇ K1000( Karnataka1000) Rally ಯಲ್ಲಿ ಬೆಂಗಳೂರಿನ ಡ್ರೈವರ್ Harish KN ರವರ ಜೊತೆ FMSCI Classic ಕ್ಯಾಟಗರಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಹಾಗೂ 2025 ರಲ್ಲಿ ಚೆನ್ನೈ ನಲ್ಲಿ ನಡೆದ 48 ನೇ South India Rally ಯಲ್ಲಿ ಡ್ರೈವರ್ Vishakh B ರವರ ಜೊತೆ INRC3 ಕೆಟಗರಿ ಅಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ, 2025 ನವೆಂಬರ್ 14 ರಿಂದ16 ರ ವರೆಗೆ ಕೊಡಗಿನಲ್ಲಿ ನಡೆದ Robusta Rally ಯಲ್ಲಿ 59 ಸ್ಪರ್ಧಿಗಳ ನಡುವೆ Overall ತೃತೀಯ ಸ್ಥಾನ ಪಡೆದುದಲ್ಲದೆ INRC3 ಕ್ಯಾಟಗರಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನೂ ಪಡೆದುಕೊಂಡಿದ್ದಾರೆ.

ಶ್ರೀ ಚಿರಂತ್ ಜೈನ್ ಇವರು ಕಾರ್ಕಳ ಶಿರ್ಲಾಲಿನ ಶ್ರೀ ರತ್ನರಾಜ್ ಹೆಗ್ಡೆ ಮತ್ತು ಶ್ರೀಮತಿ ನೀತು ಜೈನ್ ಇವರ ಸುಪುತ್ರರಾಗಿದ್ದು, ಮೂಡಬಿದ್ರೆಯ ಮೈಟ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ
ಗಳಿಸಿ ಪ್ರಸ್ತುತ ಬೆಂಗಳೂರಿನ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿರುವುದರೊಂದಿಗೆ ,ರೇಸಿಂಗ್ ಕ್ಷೇತ್ರದಲ್ಲೂ ಉತ್ತಮ ಸಾಧನೆ ಗೈಯುತ್ತಿದ್ದಾರೆ. ಸಾಧಕರಿಗೆ ಹೆತ್ತವರು, ಸ್ನೇಹಿತರು ಹಾಗೂ ಸಮಾಜದ ಗಣ್ಯರು ಶುಭ ಹಾರೈಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page