
ಕಾರ್ಕಳ: ಆನೆಕೆರೆ ಭವಾನಿ ಸರ್ಕಲ್ ಬಳಿಯ ಬಾಟ ಶೋರೂಮ್ ಎದುರು ಯುನೈಟೆಡ್ ಟೊಯೊಟೊದ ನೂತನ ಶೋರೂಮ್ ಟಿಸ್ಪರ್ಶ್ ಇದರ ಉದ್ಘಾಟನೆಯನ್ನು ಧರ್ಮಸ್ಥಳದ ಉಜಿರೆಯ ಎಸ್. ಡಿ. ಎಂ. ಕಾಲೇಜಿನ ಸಹಾಯಕ ಪ್ರಾದ್ಯಾಪಕ, ಮಾಜಿ ರೇಡಿಯೋ ಜಾಕಿ, ರೆಡಿಯೋ ಎಫ್. ಎಂ. ಡಾ | ಸುವೀರ್ ಜೈನ್ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಇಂದು ಜನರಲ್ಲಿ ಇನೋವ ಕಾರ್‌ನ ಆಯ್ಕೆ ಬಾರಿ ಇದ್ದು ಕಾರ್ಕಳದಲ್ಲಿ ಸಂಸ್ಥೆ ಅವಶ್ಯಕತೆಯಿದ್ದು ಗ್ರಾಹಕರ ಸೇವೆಯಲ್ಲಿ ನಂ. ವನ್ ಆಗಿದೆ. ಅಪಾರ ಬೇಡಿಕೆಯ ಕಾರ್‌ನ್ನು ಬೇರೆ ಊರಿನಿಂದ ತರುವ ಬದಲಿಗೆ ಕಾರ್ಕಳದಲ್ಲಿ ಸಂಸ್ಥೆ ಪ್ರಾರಂಭವಾಗಿದ್ದು ಸಂತಸವಾಗಿದೆಯೆAದರು. ಇನೋರ್ವ ಅತಿಥಿ ಬಿ. ಗಣಪತಿ ಹೆಗ್ಡೆ, ಬಿ. ವಿನಾಯಕ ಹೆಗ್ಡೆ, ಸಂಸ್ಥೆಗೆ ಶುಭ ಹಾರೈಸಿದರು. ಯುನೈಟೆಡ್ ಟೊಯೊಟೊದ ದ.ಕ., ಉಡುಪಿ, ಉ.ಕನ್ನಡ ಜಿಲ್ಲೆಯ ವಿತರಕ ಸಂಸ್ಥೆಯ ಎಂ. ಡಿ. ಆರೂರು ರಾಮ್ ಗೊಪಾಲ್ ರಾವ್‌ರವರು ಹಾಗೂ ಸಂಸ್ಥ್ತೆಯ ಸಿ. ಇ. ಒ. ರಮೇಶ್ ಪ್ರಭು ಉಪಸಿತ್ಥರಿದ್ದರು. ಕಾರ್ಯಕ್ರಮವನ್ನು ಕಾರ್ತೀಕ್ ನಿರೂಪಿಸಿದರು. ಪ್ರಥಮ ಗ್ರಾಹಕರಾಗಿ ನಕ್ರೆಯ ವಿಕ್ಟರ್ ಮತ್ತು ಕುಟುಂಬಸ್ಥರು ಕಾರನ್ನು ಖರೀದಿಸಿದರು.



















