
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ರಿ.) ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು ಘಟಕದ ಆಶ್ರಯದಲ್ಲಿ 10 ವರ್ಷಗಳ ಹಿಂದೆ ಕಾಪುಬೀಚಿನಲ್ಲಿ ದುರ್ಮರಣಕಿಡಾದ ಕಾಳಿಕಾಂಬಾ ನಿವಾಸಿಗಳಾದ ದಿ| ಜಗದೀಶ್ ರಾವ್, ದಿ|ಹರ್ಷ ರಾವ್,ದಿ| ಸುನಿಲ್ ರಾವ್ ರವರ ಸ್ಮರಣಾರ್ಥ ಪ್ರತಿವರ್ಷದಂತೆ ಸ್ವಚ್ಛತಾ ಕಾರ್ಯವು ದಾನಶಾಲೆ ,ಕಾಳಿಕಾಂಬಾ, ಕರಿಯಕಲ್ಲು ಪರಿಸರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್ ಕವಡೆ, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ತಾಲೂಕು ಕಾರ್ಯದರ್ಶಿ ಹರೀಶ್ ರಾವ್ ಅಸ್ವಾಲ್, ಕೋಶಾಧಿಕಾರಿ ಸತೀಶ್ ರಾವ್ ಪವಾರ್ ,ಹರಿಶ್ಚಂದ್ರ ರಾವ್ ಮೋರೆ, ದಿನೇಶ್ ರಾವ್,ನಾಗೇಶ್ ರಾವ್, ಆದಿತ್ಯ ರಾವ್, ರಾಜೇಶ್ ರಾವ್, ಕಾರ್ತಿಕ್ ರಾವ್, ನಿಖಿಲ್ ರಾವ್,ವಿನ್ಯಾಸ್ ರಾವ್, ಭುವನ್ ರಾವ್ ,ಅಮೋಘ್ ರಾವ್, ಸುಧೀರ್ ರಾವ್ ,ಪ್ರಶಾಂತ್ ರಾವ್ ,ಸುಧಾಕರ್ ಕೋಟ್ಯಾನ್ ,ಕೃಷ್ಣ ನಾಯಕ್ ,ಜಗದೀಶ್ ಆಚಾರ್ಯ, ಸಮೃದ್ಧಿ ರಾವ್ ,ರಮೇಶ್ ಕೆ ಮೊದಲಾದವರು ಉಪಸ್ಥಿತರಿದ್ದರು.







