ಕಾರ್ಕಳ: ನಗರ ಪೊಲೀಸ್ ಠಾಣೆ ಪಿಎಸ್ಐ ಸಂದೀಪ್ ಕುಮಾರ್ ಅವರ ಮೊಬೈಲ್ ವಾಟ್ಸಪ್ ಗೆ ಸರಕಾರಕ್ಕೆ ರಾಜಧನ ಪಾವತಿ ಮಾಡುವುದನ್ನು ತಪ್ಪಿಸಲು ಜಿಪಿಎಸ್ ಇಲ್ಲದ ವಾಹನಗಳಿಗೆ ಮಾತ್ರ ಜಲ್ಲಿ ನೀಡುವುದಾಗಿ ಹೇಳಿದ ಆಡಿಯೋ ರೆಕಾರ್ಡ್ ಬಂದಿದ್ದು ಇದನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಆಡಿಯೋ ರೆಕಾರ್ಡ್ ನಲ್ಲಿ ಸಿದ್ದಿ ಸುಬ್ರಹ್ಮಣ್ಯ ಕ್ರಷರ್ ನಿಂದ ಮಾತನಾಡುವುದಾಗಿ ಹೇಳಿಕೊಂಡ ವ್ಯಕ್ತಿಯೊಬ್ಬ ಕ್ರಷರ್ ನಲ್ಲಿ ಲೋಡಿಂಗ್ ಬಂದ್ ಮಾಡಿದ್ದೇವೆ. ನಿಮಗೆ ಗೊತ್ತಿರುವವರಿಗೆ ಹೇಳಿ, ಜಿಪಿಎಸ್ ಇರುವ ಗಾಡಿಗೆ ಲೋಡ್ ಕೊಡುವುದಿಲ್ಲ. ಜಿಪಿಎಸ್ ಇಲ್ಲದ ಗಾಡಿಗೆ ಮಾತ್ರ ಜಲ್ಲಿ ನೋಡ್ ಕೊಡುವುದಾಗಿ ಹೇಳಿದ್ದರು.
ಜಿಪಿಎಸ್ ಇರುವ ವಾಹನಕ್ಕೆ ಜಲ್ಲಿ ಲೋಡ್ ಮಾಡಿದರೆ ಸರ್ಕಾರಕ್ಕೆ ರಾಜಧಾನಿ ಪಾವತಿಸಬೇಕು. ಹೀಗಾಗಿ ಸರ್ಕಾರದ ಕಾನೂನು ಸಮ್ಮತ ಕರಾರನ್ನು ಉಲ್ಲಂಘಿಸಿ ಗಣಿ ಉತ್ಪನ್ನವನ್ನು ಅಪ್ರಾಮಾಣಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.