ಸನ್ನೆ ಮೂಲಕ ರಣವೀರ್‌ಗೆ ಸಭ್ಯ ಉತ್ತರ ನೀಡಿದ ರಿಷಬ್ ಶೆಟ್ಟಿ

ಇತ್ತೀಚೆಗೆ ಗೊವಾ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಗ್ಗೆ ಚರ್ಚೆಯಾಗಿದ್ದು ಈ ವೇಳೆ ಬಹುತೇಕರು ಸಿನಿಮಾವನ್ನು ಹೊಗಳಿದ್ದರು. ಆದರೆ, ರಣವೀರ್ ಸಿಂಗ್ ಈ ಸಿನಿಮಾದ ಕುರಿತು ಮಾತನಾಡುವ ವೇಳೆ ದೈವವನ್ನು ದೆವ್ವ ಎಂದಿದ್ದು ಅಲ್ಲದೆ, ದೈವವನ್ನು ಅನುಕರಿಸಲು ಹೊಗಿ ಟೀಕೆಗೆ ಗುರಿಯಾಗಿದ್ದಾರೆ.
ರಿಷಬ್ ಅವರ ನಟನೆ ಹೊಗಳಿದ ರಣವೀರ್ ಅವರು, ‘ದೆವ್ವ ಮೈಮೇಲೆ ಬಂದಂತೆ ನಟಿಸಿದ್ದು ಅದ್ಭುತವಾಗಿತ್ತು’ ಎಂದು ಹೇಳಿದ್ದಲ್ಲದೆ ದೈವವನ್ನು ಅವರು ತಮ್ಮ ವಿಚಿತ್ರ ಸ್ಟೈಲ್ನಲ್ಲಿ ಅನುಕರಿಸಿದ್ದಾರೆ. ಈ ಮೂಲಕ ಸಂಸ್ಕೃತಿಗೆ ಅವರು ಅವಮಾನ ಮಾಡಿದ್ದಾರೆ.ಈ ಸಂದರ್ಭದಲ್ಲಿ ರಿಷಬ್ ಅವರು ಮುಖ ಮುಚ್ಚಿಕೊಳ್ಳುತ್ತಿದ್ದು ರಿಷಬ್ ಅವರು ರಣವೀರ್ಗೆ ಉತ್ತರ ನೀಡಬೇಕಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ ನಿಜವಾಗಿ ರಿಷಬ್ ಅವರು ರಣವೀರ್ಗೆ ಉತ್ತರ ನೀಡಿದ್ದಾರೆ. ವೇದಿಕೆಯಿಂದ ಇಳಿದು ಬಂದ ರಣವೀರ್ ಸಿಂಗ್ ಅವರು ರಿಷಬ್ ನ ಹಗ್ ಮಾಡಲು ಬಂದಾಗ ಅವರು ಮತ್ತೆ ದೈವವನ್ನು ಅನುಕರಿಸುವ ಪ್ರಯತ್ನ ಮಾಡಿದ್ದಾರೆ. ಆಗ ರಿಷಬ್ ಅವರು ಹಾಗೆ ಮಾಡಬಾರದು ಎಂದು, ಬೆರಳಲ್ಲೇ ಸನ್ನೆ ಮಾಡಿ ತೋರಿಸಿದ್ದಾರೆ. ಈ ವಿಡಿಯೋ ತಡವಾಗಿ ವೈರಲ್ ಆಗಿದೆ.





