ಸಹ ಕಲಾವಿದ ವಿಜು.ಕೆ ಹೃದಯಾಘಾತದಿಂದ ಸಾವು

ಕಾಂತಾರ (ಚಾಪ್ಟರ್ 1) ಚಿತ್ರದ ಸಹಕಾಲಾವಿದ ವಿಜು ಕೆ ಹೃದಯಘಾತದಿಂದ ಶಿವಮೊಗ್ಗದಲ್ಲಿ ಸಾವನ್ನಪ್ಪಿದ್ದಾರೆ.
ಇವರು ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದರಾಗಿದ್ದು, ಕಾಂತಾರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದ ಸಮಯ ಎದೆ ನೋವು ಕಾಣಿಸಿಕೊಂಡಿದ್ದು ,ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಆಗುಂಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.



















