4 ಸಲ ಸತ್ತೇ ಹೋಗ್ತಿದ್ದೆ, ದೈವ ನನ್ನನ್ನು ಬದುಕಿಸಿದೆ: ರಿಷಬ್ ಶೆಟ್ಟಿ

ಕಾಂತಾರ ಚಾಪ್ಟರ್ 1 ಟ್ರೈಲರ್ ರಿಲೀಸ್ ಆಗಿದ್ದು, ನಟ ರಿಷಬ್ ಶೆಟ್ಟಿ ತನ್ನ ಚಿತ್ರದ ಕುರಿತು ಪತ್ರಿಕಾಗೋಷ್ಠಿಯಲ್ಲಿ, ಮಾತನಾಡುವ ಸಂದರ್ಭ ಕಾಂತಾರ ಸಿನಿಮಾ ನನ್ನ ಐದು ವರ್ಷದ ದೊಡ್ಡ ಎಮೋಷನಲ್ ಜರ್ನಿ. ಈ ಚಿತ್ರ ಬಹಳಷ್ಟು ಅಡೆತಡೆಗಳನ್ನು ಕಂಡಿದೆ ಎಂದಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷಿತ ಚಿತ್ರವಾದ ಕಾಂತಾರ ಚಾಪ್ಟರ್ 1 ಚಿತ್ರದ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷೆಯ ಟ್ರೇಲರ್ ಬಿಡುಗಡೆಗೊಂಡಿದೆ. ಈ ಚಿತ್ರ ಆರಂಭದಿಂದಲೂ ಹಲವು ವಿಷಯಗಳಿಂದ ಸುದ್ದಿಯಲ್ಲಿತ್ತು. ಇದೀಗ ಈ ಚಿತ್ರದ ಕುರಿತು ಮಾತನಾಡಿರುವ ನಟ ರಿಷಬ್ ಶೆಟ್ಟಿ, ನನ್ನ ಹೆಂಡ್ತಿ ಅದೆಷ್ಟು ಹರಕೆ ಹೊತ್ತಿದ್ದಾಳೋ..
ನಾನು ಶೂಟಿಂಗ್ ಹೊರಡುವ ಸಂದರ್ಭ ಪ್ರತಿ ಭಾರಿ ದೇವರ ಮುಂದೆ ಪ್ರಾರ್ಥನೆ ಮಾಡ್ತಿದ್ಲು. ಈ ಚಿತ್ರಕ್ಕೆ ಬಹಳಷ್ಟು ಮಂದಿ ಸಹಕಾರ ನೀಡಿದ್ದಾರೆ .ಅದಲ್ಲದೆ ,ತಾನು ದಿನದಲ್ಲಿ ಕೇವಲ ಎರಡು ಗಂಟೆಯಷ್ಟೇ ಮಲಗಲು ಸಮಯ ಸಿಗುತ್ತಿತ್ತು. ನಾಲ್ಕು ಸಲ ನಾನು ಸತ್ತೇ ಹೋಗ್ತಿದ್ದೆ ದೈವ ಬದುಕಿಸಿದೆ. ಇನ್ನೊಂದು ಸಲ ಹೇಗಿದ್ದೀರಾ ಅಂತ ಯಾರಾದರೂ ಕೇಳಿದರೆ ಅತ್ತೆ ಬಿಡ್ತೀನಿ ಎನ್ನುವ ಮೂಲಕ ಭಾವುಕರಾದರು.
ಸೆ.27ರಿಂದ ಸಿನಿಮಾದ ಪ್ರಚಾರ ಕಾರ್ಯ ಶುರುವಾಗಲಿದೆ. ಮೊದಲು ಕೊಚ್ಚಿ, ಚೆನ್ನೈ, ಹೈದರಾಬಾದ್ ಹಾಗೂ ನಾರ್ತ್ ಇಂಡಿಯಾದಲ್ಲಿ ಪ್ರಚಾರ ಮಾಡಲಿದ್ದೇವೆ ಎಂದು ತಿಳಿಸಿದರು.









