
ಬೆಂಗಳೂರು: ರಾಜ್ಯ ಸರ್ಕಾರವು ಕರ್ತವ್ಯನಿಷ್ಠೆ ಐಎಎಸ್ ಅಧಿಕಾರಿ ದಿವಂಗತ ಮಹಾಂತೇಶ್ ಬೀಳಗಿ ಅವರ ಕುಟುಂಬಕ್ಕೆ ಭರವಸೆಯ ಕೈ ನೀಡಿದ್ದು ಅದೇನೆಂದರೆ ಅಪಘಾತದಲ್ಲಿ ನಿಧನರಾದ ಮಹಾಂತೇಶ್ ಅವರ ಪುತ್ರಿ ಕುಮಾರಿ ಚೈತನ್ಯಾ ಎಂ. ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಕರ್ನಾಟಕ ಸರ್ಕಾರ ಸಚಿವಾಲಯದಲ್ಲಿ ಸಹಾಯಕ ಹುದ್ದೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವತಃ ನೇಮಕಾತಿ ಆದೇಶವನ್ನು ಚೈತನ್ಯಾ ಅವರಿಗೆ ಹಸ್ತಾಂತರಿಸಿದ್ದು
ಈ ವೇಳೆ ಸಚಿವರಾದ ಹೆಚ್.ಕೆ. ಪಾಟೀಲ್, ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ಹಾಗೂ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
1996ರ ಅನುಕಂಪದ ನೇಮಕಾತಿ ನಿಯಮಗಳ ಅನ್ವಯ, ಚೈತನ್ಯಾ ಅವರಿಗೆ ₹49,050–92,500 ವೇತನ ಶ್ರೇಣಿಯಲ್ಲಿ ಎರಡು ವರ್ಷಗಳ ಪರೀಕ್ಷಾರ್ಥಾವಧಿಯೊಂದಿಗೆ ನೇಮಕ ಮಾಡಲಾಗಿದೆ.
15 ದಿನಗಳೊಳಗೆ ಕರ್ತವ್ಯಕ್ಕೆ ಹಾಜರಾಗಬೇಕಿದ್ದು, ಅಗತ್ಯ ನಡತೆ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ. ಈ ನೇಮಕಾತಿ ಸರ್ಕಾರದ ಮಾನವೀಯ ನಿಲುವಿನ ಸ್ಪಷ್ಟ ಸಂದೇಶವಾಗಿದ್ದು, ದಿವಂಗತ ಅಧಿಕಾರಿಯ ಕುಟುಂಬಕ್ಕೆ ಧೈರ್ಯ ತುಂಬಿದೆ.



















