
ಕನ್ನಡ ಚಿತ್ರರಂಗದ ಹಿರಿಯ ನಟ ಹರೀಶ್ ರಾಯ್ ನಿಧನರಾಗಿದ್ದಾರೆ.
ಇವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಂದು 11 ಘಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಓಂ, ನಲ್ಲ, ಜೋಡಿಹಕ್ಕಿ , ಆಪರೇಷನ್ ಅಂತ, ಇವರ ಅಭಿನಯದ ಸೂಪರ್ ಹಿಟ್ ಚಿತ್ರಗಳು ಕೆಜಿಎಫ್ , ಕೆಜಿಎಫ್ 2 ಚಿತ್ರದಲ್ಲೂ ಚಾಚಾ ಪಾತ್ರದಲ್ಲಿ ಇವರ ನಟನೆ ಪ್ರಶಂಸೆಗೆ ಪಾತ್ರವಾಗಿತ್ತು. ಉಡುಪಿ ಮೂಲದವರಾಗಿದ್ದ ಹರೀಶ್ ರಾಯ್ ಅನಾರೋಗ್ಯಕೀಡಾಗಿದ್ದು, ಕನ್ನಡ ಚಿತ್ರರಂಗದ ಹಲವು ನಟ ನಟಿಯರು ಇವರಿಗೆ ಆರ್ಥಿಕ ನೆರವು ನೀಡಿದ್ದರು.





















































