
ಕಾರ್ಕಳ : ಕಣಜಾರು ಪಟೇಲ್ ಶೇಖರ್ ಹೆಗ್ಡೆಯವರ ಅಳಿಯ ನವೀನ್ಚಂದ್ರ ಹೆಗ್ಡೆ (86) ಅ.29ರಂದು ರಾತ್ರಿ ಕಣಜಾರಿನ ಸ್ವಗೃಹದಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮಡಿಬೆಟ್ಟು ಶಾಲ ಟ್ರಸ್ಟಿ ಮತ್ತು ಸಂಚಾಲಕರಾಗಿದ್ದರು. ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡು ಹಲವಾರು ಕೊಡುಗೆಗಳನ್ನು ನೀಡಿದ್ದರು. ಪತ್ನಿ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.







