
ಭಾರತೀಯ ಜೇಸಿ ಇಂಟರ್ನ್ಯಾಷನಲ್ ನೀಡುವ ಪ್ರಪ್ರಥಮ ಔಟ್ ಸ್ಟ್ಯಾಂಡಿಂಗ್ ಜೇಸಿ ಇಂಡಿಯಾ ಮೀಡಿಯಾ ಇನ್ಫ್ಲ್ಯೂಲೆನ್ಸರ್ ಅವಾರ್ಡ್ 2025 ಕಾರ್ಕಳದ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಶ್ರೀಮತಿ ವಂದನಾ ರೈ ಅವರು ಸ್ವೀಕರಿಸಿದರು.
ಈ ಪ್ರಶಸ್ತಿಗೆ ಭಾರತದಾದ್ಯಂತ ಹಲವು ಖ್ಯಾತ ಸೋಶಿಯಲ್ ಮೀಡಿಯಾ ಹಾಗೂ ಚಾನೆಲ್ ನವರು ಈ ಸ್ಪರ್ಧೆಗೆ ಬಿಡ್ ಸಲ್ಲಿಸಿದ್ದರು. ಅಂತಿಮವಾಗಿ ತಮ್ಮ ABCD ಹಾಡಿಗೆ 5 ಕೋಟಿ 70ಲಕ್ಷ ಹಾಗೂ 5 ಲಕ್ಷ ಫಾಲೋವರ್ಸ್ ಗಳ ಮೂಲಕ ಸೃಜನಶೀಲ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ವಂದನಾ ರೈ ಪಾಲಾಯಿತು. ಜೇಸಿಐ ಕಾರ್ಕಳ ವಂದನಾ ರೈ ಅವರ ಹೆಸರನ್ನು ನಾಮನಿರ್ದೇಶನ ಮಾಡಿತ್ತು.
ಜೇಸಿಐ ಇಂಡಿಯಾ ರಾಷ್ಟ್ರಾಧ್ಯಕ್ಷರಾದ ಜೇಸಿ ಅಂಕುರ್ ಜುನ್ ಜುನ್ ವಾಲಾ ಈ ಪ್ರಶಸ್ತಿಯನ್ನು ಚೆನ್ನೈನ ಐಟಿಸಿ ಚೋಳಮ್ ಹೋಟೆಲ್ ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.





