
ಬೆಂಗಳೂರು: ಟೆಲಿಕಾಂ ಕ್ಷೇತ್ರದಲ್ಲಿ ಗ್ರಾಹಕರಿಗೆ ಹೊಸ ಅನುಭವ ನೀಡುವ ನಿಟ್ಟಿನಲ್ಲಿ ಏರ್ಟೆಲ್ ಮಹತ್ವದ ಘೋಷಣೆ ಮಾಡಿದೆ. ದೇಶದ 36 ಕೋಟಿ ಏರ್ಟೆಲ್ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಅಡೋಬ್ ಎಕ್ಸ್ಪ್ರೆಸ್ ಪ್ರೀಮಿಯಂ ಸೇವೆಯನ್ನು ಒಂದು ವರ್ಷ ಉಚಿತವಾಗಿ ನೀಡುವುದಾಗಿ ಕಂಪನಿ ತಿಳಿಸಿದೆ.
ಈ ಸಹಭಾಗಿತ್ವದ ಮೂಲಕ ಗ್ರಾಹಕರು ಸೋಶಿಯಲ್ ಮೀಡಿಯಾ ಪೋಸ್ಟ್ಗಳು, ಮಾರ್ಕೆಟಿಂಗ್ ಕಂಟೆಂಟ್, ಸಣ್ಣ ವಿಡಿಯೋಗಳನ್ನು ಸುಲಭವಾಗಿ ಮತ್ತು ವೇಗವಾಗಿ ತಯಾರಿಸಬಹುದು. ಮೊಬೈಲ್, ವೈ-ಫೈ ಮತ್ತು ಡಿಟಿಎಚ್ ಸೇರಿದಂತೆ ಎಲ್ಲಾ ಏರ್ಟೆಲ್ ಗ್ರಾಹಕರು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ ಮೂಲಕ ಯಾವುದೇ ಕ್ರೆಡಿಟ್ ಕಾರ್ಡ್ ವಿವರಗಳಿಲ್ಲದೆ ಈ ಸೌಲಭ್ಯವನ್ನು ಪಡೆಯಬಹುದು.
ಅಡೋಬ್ ಎಕ್ಸ್ ಪ್ರೆಸ್ ಪ್ರೀಮಿಯಂ, ಅಡೋಬ್ ನ ಅತ್ಯುತ್ತಮ ವೈಶಿಷ್ಟ್ಯಗಳನ್ನು ಜನರ ಕೈಗೆಟುಕುವಂತೆ ಮಾಡುತ್ತದೆ. ಈ ಚಂದಾದಾರಿಕೆಯು ಭಾರತೀಯ ಮನೆಮಂದಿಯ ಹಬ್ಬಗಳು, ಮದುವೆಗಳು ಮತ್ತು ಸ್ಥಳೀಯ ಉದ್ಯಮಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ಸಾವಿರಾರು ಸಿದ್ಧ ಟೆಂಪ್ಲೇಟ್ ಗಳನ್ನು ಹೊಂದಲು ಅನುವು ಮಾಡಿಕೊಡುತ್ತದೆ. ಇದರೊಂದಿಗೆ, ಬ್ಯಾಕ್ ಗ್ರೌಂಡ್ ಅನ್ನು ತಕ್ಷಣವೇ ತೆಗೆದುಹಾಕುವುದು, ಕಸ್ಟಮ್ ಚಿತ್ರಗಳನ್ನು ಸೃಷ್ಟಿಸುವುದು, ಒಂದೇ ಟ್ಯಾಪ್ ನಲ್ಲಿ ವಿಡಿಯೋ ಎಡಿಟಿಂಗ್, ಪ್ರೀಮಿಯಂ ಅಡೋಬ್ ಸ್ಟಾಕ್ ಅಸೆಟ್ ಗಳು, 30,000 ಕ್ಕೂ ಹೆಚ್ಚು ವೃತ್ತಿಪರ ಫಾಂಟ್ ಗಳು ಹಾಗೂ 100 ಜಿಬಿ ಕ್ಲೌಡ್ ಸ್ಟೋರೇಜ್ ನಂತಹ ಎಐ ಚಾಲಿತ ಸೌಲಭ್ಯಗಳನ್ನು ಇದು ಒಳಗೊಂಡಿದೆ.
ಅಲ್ಲದೆ ಆಟೋ ಕ್ಯಾಪ್ಶನ್ ಗಳು ಮತ್ತು ಇನ್ ಸ್ಟಾಂಟ್ ರೀಸೈಜ್ ಮುಂತಾದ ಸುಧಾರಿತ ವೈಶಿಷ್ಟ್ಯಗಳು ಯಾವುದೇ ವಾಟರ್ಮಾರ್ಕ್ ಇಲ್ಲದೆ ಲಭ್ಯವಿದ್ದು, ವಿವಿಧ ಡಿವೈಸ್ ಗಳ ನಡುವೆ ಸುಲಭವಾಗಿ ಸಿಂಕ್ ಆಗುತ್ತವೆ. ಅಡೋಬ್ ಎಕ್ಸ್ ಪ್ರೆಸ್ ಇಂಗ್ಲಿಷ್, ಹಿಂದಿ, ತಮಿಳು ಮತ್ತು ಬೆಂಗಾಲಿ ಭಾಷೆಗಳಲ್ಲಿ ಲಭ್ಯವಿದ್ದು, ಬಳಕೆದಾರರು ತಮ್ಮ ತಮ್ಮ ಭಾಷೆಗಳಲ್ಲೇ ಈ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಹಬ್ಬದ ಶುಭಾಶಯ ಪತ್ರಗಳು, ಮದುವೆಯ ಆಹ್ವಾನ ಪತ್ರಿಕೆಗಳು, ಸ್ಥಳೀಯ ಅಂಗಡಿಗಳ ಪ್ರಚಾರದ ಕಂಟೆಂಟ್ ಗಳು ಅಥವಾ ವಾಟ್ಸಾಪ್ ಸ್ಟೇಟಸ್ ಅಪ್ ಡೇಟ್ ಗಳನ್ನು ತಯಾರಿಸಲು ಅಡೋಬ್ ಎಕ್ಸ್ ಪ್ರೆಸ್ ಎಲ್ಲರಿಗೂ ಅತ್ಯುತ್ತಮ ವೇದಿಕೆಯಾಗಿದೆ.



















