ವಿದ್ಯುತ್ ಸಂಪರ್ಕ ಕಡಿತ, ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಹೇಳಿಕೆ, ಹಾಸ್ಯಾಸ್ಪದ
ಪ್ರತಿಭಟನೆಯ ಕರೆಗೆ ಹೆದರಿ, ವಿದ್ಯುತ್ ಮರುಸಂಪರ್ಕ : ರವೀಂದ್ರ ಮೊಯ್ಲಿ

ಎಣ್ಣೆಹೊಳೆ ಏತ ನೀರಾವರಿ ಯೋಜನೆಯು ಭಾರತೀಯ ಜನತಾಪಾರ್ಟಿಯ ಸರ್ಕಾರ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದಾಗ ಹಾಗೂ ಸುನೀಲ್ ಕುಮಾರ್ ರವರು ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಮರ್ಣೆ,ಹಿರ್ಗಾನ, ಕುಕ್ಕುಂದೂರು, ಕಡ್ತಲ ಗ್ರಾಮದ ರೈತರ ಬೇಸಾಯ ಮತ್ತು ತೋಟಗಳಿಗೆ ನೀರಿನ ಆಸರೆಗಾಗಿ ಮಾಡಿದ ಬಹುಪಯೋಗಿ ನೀರಿನ ಯೋಜನೆ.ಕಾಂಗ್ರೆಸ್ಸ್ ನೇತೃತ್ವದ ರಾಜ್ಯ ಸರ್ಕಾರ ಇದೀಗ ಸದ್ರಿ ಘಟಕದ ವಿದ್ಯುತ್ ಬಿಲ್ ಪಾವತಿ ಮಾಡದೆ ಕಡು ಬೇಸಗೆಯ ಈ ಸಂದರ್ಭದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ಜಗಜ್ಜಾಹಿರವಾಗಿದೆ. ಮೆಸ್ಕಾಂ ಇಲಾಖೆ ದಿನಾಂಕ 07/02/2026 ರಂದು ಪತ್ರ ಸಂಖ್ಯೆ ಸ.ಕ.ನಿ.ಇಂ.(ವಿ)/ಸಲೆ ಅ/ಹೆಬ್ರಿ/25-26-4345-48 ರಂತೆ ಜನವರಿ 2026 ರ ಅಂತ್ಯದ ವರೆಗಿನ ಬಾಕಿ ರೂ.1,87,92,170/ ತಕ್ಷಣ ಪಾವತಿಸುವಂತೆ ತಪ್ಪಿದಲ್ಲಿ ವಿದ್ಯುತ್ ಕಡಿತದ ನೋಟೀಸು ನೀಡಿದ್ದು ಆ ನಂತರವೂ ಸರ್ಕಾರ ವಿದ್ಯುತ್ ಬಿಲ್ ಪಾವತಿಸದ ಕಾರಣ ಮೂರು ದಿನಗಳ ಹಿಂದೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಲಭ್ಯ ಮಾಹಿತಿಯ ಪ್ರಕಾರ ಪೆಬ್ರವರಿ ತಿಂಗಳ ಅಂತ್ಯಕ್ಕೆ ಬಾಕಿ ಮೊತ್ತ 2,090,5000/. ಇದು ಸರ್ಕಾರದ ದಿವಾಳಿತನದತ್ತ ಸಾಗುವ ಸೂಚನೆಯೇ..?
ಭಾರತೀಯ ಜನತಾಪಾರ್ಟಿ ನೀಡಿದ ಪ್ರತಿಭಟನೆಯ ಕರೆಗೆ ಬೆದರಿ ನಡು ಬಗ್ಗಿಸಿ ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್ ಮರುಸಂಪರ್ಕ ನೀಡಲಾಗಿದ್ದರೂ,ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಯವರು “ಎಣ್ಣೆಹೊಳೆ ಏತ ನೀರಾವರಿ ಯೋಜನೆಗೆ ವಿದ್ಯುತ್ ಮರುಸಂಪರ್ಕ ರೈತರಲ್ಲಿ ಹರ್ಷ “ಹೇಳಿಕೆ ಹಾಸ್ಯಾಸ್ಪದ ಮತ್ತು ಅಪ್ರಬುದ್ದ ಎಂದು ರವೀಂದ್ರ ಮೊಯ್ಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಒಂದೊಮ್ಮೆಉಪಮುಖ್ಯಮಂತ್ರಿಯವರನ್ನೂ ಸೇರಿಸಿ ವಿವಿಧ ಸಚಿವರಿಗೆ ಕರೆ ಮಾಡಿ ಮರು ಸಂಪರ್ಕ ಮಾಡಿಸಿದೆ ಎಂದೆನ್ನುವ ಇವರು ಮರುಕ್ಷಣ ತಾಂತ್ರಿಕ ದೋಷದಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು ಎಂಬ ದ್ವಂದ್ವ ಹೇಳಿಕೆಯಿಂದ ಜನರ ಮುಂದೆ ನಗೆಪಾಠಲಿಗೀಡಾಗಿದ್ದಾರೆ…
ತಾಂತ್ರಿಕ ದೋಷ ಸರಿ ಪಡಿಸಲು ಇಲಾಖೆಯ ಇಂಜೀನೀಯರ್ ಗಳನ್ನು ಕರೆಯಬೇಕೇ ವಿನಹ ಮಂತ್ರಿಗಳಿಗೆ ಕರೆ ಮಾಡುವ ಅವಶ್ಯಕತೆ ಇದೆಯೇ? ಇದು ಸಾಮಾನ್ಯ ಜ್ಞಾನ
ಕಾರ್ಕಳ ನೂರು ಪ್ರತಿಶತ
ಸಾಕ್ಷರತೆ ಹೊಂದಿದ ತಾಲೂಕು ಇಲ್ಲಿನ ಜನತೆ ವಿದ್ಯಾವಂತರು ಹಾಗೂ ಪ್ರಭುದ್ದರಿದ್ದಾರೆ.ಇನ್ನಾದರೂ ಇಂತಹ ಅಪ್ರಬುದ್ದ, ಬಾಲಿಷತನ ಹೇಳಿಗೆ ನೀಡುವುದನ್ನು ಬಿಟ್ಟು ವಾಸ್ತವ ಚಿತ್ರಣ ಜನತೆಯ ಮುಂದಿಡಿ ಎಂದು ಕಾರ್ಕಳ ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ತಿಳಿಸಿದ್ದಾರೆ.






