ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನದ ಜೊತೆ, ರಾಜ್ಯಕ್ಕೆ 9ನೇ ಸ್ಥಾನ

ಅನುಷಾ ನಾಯಕ್, ಎಸ್ ಎಸ್ ಎಲ್ ಸಿ ಪರೀಕ್ಷೆ ಎರಡರಲ್ಲಿ ಹೆಬ್ರಿ ತಾಲೂಕಿಗೆ ಪ್ರಥಮ,ರಾಜ್ಯಕ್ಕೆ 9ನೇ ಸ್ಥಾನ. ಅಮೃತ ಭಾರತಿ ವಿದ್ಯಾಲಯ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿನಿ ಅನುಷಾ ನಾಯಕ್ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆ ಎರಡರಲ್ಲಿ 98.75 ಅಂಕವನ್ನು ಪಡೆದು ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದಾರೆ. ರಾಜ್ಯಮಟ್ಟದಲ್ಲಿ 9ನೇ ಸ್ಥಾನವನ್ನು ಪಡೆದು ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ .
ಇವರಿಗೆ ಅಮೃತ ಭಾರತಿ ಟ್ರಸ್ಟ್ ಮತ್ತು ಮುಖ್ಯೋಪಾಧ್ಯಾಯಿನಿ , ಬೋಧಕ ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.





