
ನವದೆಹಲಿ: ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರವು ಎಂಡಿಎಚ್, ಎವರೆಸ್ಟ್ ಮಸಾಲ ಪದಾರ್ಥಗಳಿಗೆ ಹಾಂಕಾಂಗ್, ನೇಪಾಳ ಮತ್ತು ಸಿಂಗಾಪುರ ನಿಷೇಧ ಹೇರಿದ ನಡುವೆಯೇ ಈ ಕಂಪನಿಯ ಆಹಾರದಲ್ಲಿ ಯಾವುದೇ ಹಾನಿಕಾರಕ ಅಂಶಗಳಿಲ್ಲ ಎಂದು ತಿಳಿಸಿದೆ.
ಎವರೆಸ್ಟ್ ಮತ್ತು ಎಂಡಿಎಚ್ ಕಂಪನಿಯ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಆಹಾರ ಪದಾರ್ಥಗಳ 34 ಸ್ಯಾಂಪಲ್‌ಗಳನ್ನು ದೇಶಾದ್ಯಂತ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು ಇದರ ಪೈಕಿ 28 ಸ್ಯಾಂಪಲ್‌ಗಳಲ್ಲಿ ಕ್ಯಾನ್ಸರ್‌ಕಾರಕ ಎಥೆಲೈನ್ ಆಕ್ಸೈಡ್ ಇರುವುದು ಪತ್ತೆಯಾಗಿಲ್ಲ. ಹೀಗಾಗಿ ಯಾವುದೇ ಮಾರಣಾಂತಿಕ ರಾಸಾಯನಿಕ ಅಂಶಗಳಿರುವುದು ಕಂಡುಬಂದಿಲ್ಲ ಎಂದು ದೃಢೀಕರಿಸಿದೆ.