
ಉಡುಪಿ: ಕಾರ್ಕಳ ಎಎಸ್‌ಪಿ ಹರ್ಷ ಪ್ರಿಯಂವದ ಅವರ ಮಾರ್ಗದರ್ಶನದಲ್ಲಿ ಶಿರ್ವ ಠಾಣಾಧಿಕಾರಿ ಮಂಜುನಾಥ್ ಮರಬದ ಮತ್ತು ಅವರ ತಂಡವು ಶಿರ್ವ ಠಾಣಾ ವ್ಯಾಪ್ತಿಯ ಶಂಕರಪುರದಲ್ಲಿ ಮಟ್ಕಾ ಅಡ್ಡೆಗೆ ದಾಳಿ ನಡೆಸಿ ಪ್ರಮುಖ ರೂವಾರಿಗಳಾಗಿರುವ ಲಿಯೋ ಕರ್ನೆಲೋ ಹಾಗೂ ವಿಠ್ಠಲನನ್ನು ಬಂಧಿಸಿದ್ದಾರೆ.
ಆರೋಪಿ ವಿಠ್ಠಲ ವಿರುದ್ಧ ಈಗಾಗಲೇ 12 ಪ್ರಕರಣಗಳು ಹಾಗೂ ಲಿಯೋ ಕರ್ನೆಲಿಯೋ ವಿರುದ್ಧ 34 ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ಎಸ್ ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದ್ದಾರೆ.



















































