24.5 C
Udupi
Wednesday, February 4, 2026
spot_img
spot_img
HomeBlogಉಡುಪಿ: ನ. 28ರಂದು ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ನಗರದಲ್ಲಿ ಮಾರ್ಗ ಬದಲಾವಣೆ ಮತ್ತು ಸಂಚಾರ...

ಉಡುಪಿ: ನ. 28ರಂದು ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ನಗರದಲ್ಲಿ ಮಾರ್ಗ ಬದಲಾವಣೆ ಮತ್ತು ಸಂಚಾರ ನಿಷೇಧ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ

ಉಡುಪಿ: ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 28ರಂದು ಶ್ರೀ ಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ನಡೆಯಲಿರುವ ಬೃಹತ್ ಗೀತೋತ್ಸವದ ಸಲುವಾಗಿ ನಡೆಯುವ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಭಾಗಿಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ನಗರದಲ್ಲಿ ನ. 28ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆ ಮತ್ತು ಸಂಚಾರ ನಿಷೇಧ ಮಾಡಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

  • ಆದಿಉಡುಪಿ ಹೆಲಿಪಾಡ್ನಿಂದ ಕರಾವಳಿ ಜಂಕ್ಷನ್-ಬನ್ನಂಜೆ-ಶಿರಿಬೀಡು-ಕಲ್ಪಂಕ-ಶ್ರೀ ಕೃಷ್ಣ ಮಠದವರೆಗೆ ಯಾವುದೇ ವಾಹನಗಳ ಸಂಚಾರ ಮತ್ತು ಪಾರ್ಕಿಂಗ್ ನಿಷೇಧ ಮಾಡಿದ್ದು ಮಣಿಪಾಲದಿಂದ ಉಡುಪಿ ಕಡೆಗೆ ಬರುವ ಎಲ್ಲಾ ವಾಹನಗಳು ಶಾರದ ಕಲ್ಯಾಣ ಮಂಟಪ-ಬೀಡಿನಗುಡ್ಡೆ ಮಾರ್ಗವಾಗಿ ಉಡುಪಿಗೆ ಬರಬೇಕು.
  • ಕುಂದಾಪುರದಿಂದ ಉಡುಪಿ ಕಡೆಗೆ ಬರುವ ವಾಹನಗಳು ಕರಾವಳಿ ಫ್ಲೈ ಓವರ್-ಅಂಬಲಪಾಡಿ-ಬ್ರಹ್ಮಗಿರಿ-ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು.
  • ಮಂಗಳೂರಿನಿಂದ ಉಡುಪಿ ಕಡೆಗೆ ಬರುವ ವಾಹನಗಳು ಕಿನ್ನಿಮುಲ್ಕಿ-ಸ್ವಾಗತಗೋಪುರ- ಜೋಡುಕಟ್ಟೆ ಮಾರ್ಗವಾಗಿ ಉಡುಪಿಗೆ ಬರಬೇಕು.
  • ಅಂಬಾಗಿಲಿನಿಂದ ಗುಂಡಿ ಬೈಲ್ ಮಾರ್ಗವಾಗಿ ಉಡುಪಿಗೆ ಬರುವ ಎಲ್ಲಾ ವಾಹನಗಳು ಗುಂಡಿ ಬೈಲ್ ರಸಿಕಾ ಬಾರ್ ಮುಖೇನ ದೊಡ್ಡಣಗುಡ್ಡೆ-ಎಂಜಿಎಂ-ಎಸ್ಎಂ-ಬೀಡಿನಗುಡ್ಡೆ ಮಾರ್ಗದ ಮೂಲಕ ಉಡುಪಿಗೆ ಬರಬೇಕು.
  • ಮಲ್ಪೆಯಿಂದ ಬರುವ ಎಲ್ಲ ವಾಹನಗಳು ಫುಟ್ಪಾಡಿ ಮಾರ್ಗವಾಗಿ ಯಮನಪಾಡಿ ಮೂಲಕ ಕುತ್ಪಾಡಿ ಮಾರ್ಗವಾಗಿ ಆಂಬಲಪಾಡಿ ಮೂಲಕ ಉಡುಪಿಗೆ ಬರಬೇಕು.

ನಿಷೇಧವು ವಿವಿಐಪಿ ವಾಹನ, ಸರ್ಕಾರಿ ವಾಹನ ಹಾಗೂ ಎಲ್ಲಾ ರೀತಿಯ ತುರ್ತು ಸೇವೆಯ ವಾಹನಗಳನ್ನು ಹೊರತುಪಡಿಸಿ ಇನ್ನೆಲ್ಲಾ ವಾಹನಗಳಿಗೆ ಅನ್ವಯವಾಗಲಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page