18.8 C
Udupi
Sunday, December 21, 2025
spot_img
spot_img
HomeBlogಉಡುಪಿ: ಜೋಳಿಗೆಗೆ ಕಟ್ಟಿದ ಸೀರೆ ಕುತ್ತಿಗೆಗೆ ಸಿಲುಕಿ ಒಂದು ವರ್ಷದ ಮಗು ಸಾವು…!

ಉಡುಪಿ: ಜೋಳಿಗೆಗೆ ಕಟ್ಟಿದ ಸೀರೆ ಕುತ್ತಿಗೆಗೆ ಸಿಲುಕಿ ಒಂದು ವರ್ಷದ ಮಗು ಸಾವು…!

ಉಡುಪಿ: ಜೂನ್ 4ರಂದು ಕುತ್ತಿಗೆಗೆ ಜೋಳಿಗೆ ಸಿಲುಕಿ ಒಂದು ವರ್ಷದ ಮಗು ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.

ಅಯ್ಯಪ್ಪ ಎಂಬವರು ನಿಟ್ಟೂರಿನಲ್ಲಿ ಗಂಗಾಧರ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದು ಜೂನ್ ನಾಲ್ಕರಂದು ಬೆಳಗ್ಗೆ 8:00ಗೆ ಕೆಲಸಕ್ಕೆ ಹೋಗಿದ್ದರು. ಅವರ ಪತ್ನಿಯೂ ಕೂಡ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ 9:30 ವೇಳೆಗೆ ಕೆಲಸಕ್ಕೆ ಹೋದವರು 11:30ಕ್ಕೆ ಬಂದು ನೋಡಿದಾಗ ಮಗುವಿನ ಕುತ್ತಿಗೆಗೆ ಜೋಳಿಗೆಗೆ ಕಟ್ಟಿದ ಸೀರೆ ಸುತ್ತಿಕೊಂಡು ಮಗು ನೇತಾಡುತ್ತಿತ್ತು. ತಕ್ಷಣ ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು ಆದರೆ ವೈದ್ಯರು ಮಗು ಸಾವನ್ನಪ್ಪಿದೆ ಎಂದು ತಿಳಿಸಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page