30.7 C
Udupi
Tuesday, February 10, 2026
spot_img
spot_img
HomeBlogಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಆಯೋಜನೆಯಲ್ಲಿ, ಕೃಷ್ಣ ಶೆಟ್ಟಿ ಬಜಗೋಳಿ ಅಧ್ಯಕ್ಷತೆಯಲ್ಲಿ,

ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಆಯೋಜನೆಯಲ್ಲಿ, ಕೃಷ್ಣ ಶೆಟ್ಟಿ ಬಜಗೋಳಿ ಅಧ್ಯಕ್ಷತೆಯಲ್ಲಿ,

ಕಾರ್ಕಳ ನಗರ ಯುವ ಕಾಂಗ್ರೆಸ್, ಕಾರ್ಕಳ NSUI ನೇತೃತ್ವದಲ್ಲಿ,

ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ ಕಾರ್ಕಳ – 2026 ಯಶಸ್ವಿ

ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಆಯೋಜನೆಯಲ್ಲಿ ಅದ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಯವರ ಅಧ್ಯಕ್ಷತೆಯಲ್ಲಿ ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ NSUI ನೇತೃತ್ವದಲ್ಲಿ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ ಕಾರ್ಕಳ – 2026 ಇದರ ಯಶಸ್ವಿ ಸಮಾಪ್ತಿ.

ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಿ ಕೃಷ್ಣ ಶೆಟ್ಟಿ ಬಜೆಗೋಳಿ ನೇತೃತ್ವದಲ್ಲಿ ಕಾರ್ಕಳದ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ – 2026 ಕಾರ್ಯಕ್ರಮವು ಮೂರು ದಿನಗಳ ಕಾಲ (ಜನವರಿ 30, 31 ಹಾಗೂ ಫೆಬ್ರವರಿ 1, 2026) ಅತ್ಯಂತ ಶಾಂತಿ–ಸೌಹಾರ್ದತೆಯ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಕ್ರಿಕೆಟ್ ಪಂದ್ಯಾವಳಿಯ ಮೂಲಕ ದೇಶದ ಏಕತೆ, ಸಹೋದರತ್ವ ಹಾಗೂ “ಭಾರತ್ ಜೋಡೋ” ಎಂಬ ರಾಷ್ಟ್ರೀಯ ಸಂದೇಶವನ್ನು ಯುವಜನತೆಗೆ ತಲುಪಿಸುವ ಪ್ರಯತ್ನ ಮಾಡಲಾಯಿತು.

ಉಡುಪಿ ,ಮಂಗಳೂರು ಹಾಗೂ ಕಾರ್ಕಳ ಸುತ್ತಮುತ್ತಲಿನ ವಿವಿಧ ಭಾಗಗಳಿಂದ ಆಗಮಿಸಿದ ಯುವ ಕ್ರಿಕೆಟ್ ತಂಡಗಳು ಕ್ರೀಡಾಸ್ಫೂರ್ತಿ, ಶಿಸ್ತು ,ಸಹೋದರತ್ವ ಮತ್ತು ಸ್ನೇಹಭಾವದೊಂದಿಗೆ ಪಂದ್ಯಾವಳಿಯಲ್ಲಿ ಪಾಲ್ಗೊಂಡು, ಈ ಕಾರ್ಯಕ್ರಮಕ್ಕೆ ವಿಶೇಷ ಅರ್ಥಪೂರ್ಣತೆ ನೀಡಿದವು.

ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ – 2026ರ ಅಂತಿಮ ಪಂದ್ಯದಲ್ಲಿ ಮಹಾಲಿಂಗೇಶ್ವರ ಕಾರ್ಕಳ ತಂಡವು ತನ್ನ ಶ್ರೇಷ್ಠ ಆಟ ಪ್ರದರ್ಶಿಸಿ ವಿಜೇತರಾಗಿ ಹೊರಹೊಮ್ಮಿತು. ಅದಕ್ಕೆ ಸಮಾನವಾಗಿ ಹೋರಾಟ ನಡೆಸಿದ ಮಂಗಳೂರು ಮೂಲದ ಗೋರಿ ಯಂಗ್ ಬಾಯ್ಸ್ ತಂಡವು ರನ್ನರ್-ಅಪ್ ಸ್ಥಾನವನ್ನು ಪಡೆದುಕೊಂಡಿತು.

ಈ ಪಂದ್ಯಾಟದಲ್ಲಿ ಆಯ್ದ ಹಿರಿಯ ಕಾಂಗ್ರೆಸ್ಸಿಗರನ್ನು , ಯುವ ಕ್ರೀಡಾ ಪಟುಗಳನ್ನು, ಕಾರ್ಕಳದ ಅತ್ಯಂತ ಹಿರಿಯ ಕ್ರಿಕೆಟ್ ತಂಡದ ಸ್ಥಾಪಕರು ಮತ್ತು ಕಪ್ತಾನ್ನರನ್ನು ಗಣ್ಯರ ಸಮ್ಮಖದಲ್ಲಿ ಸನ್ಮಾನಿಸಲಾಯಿತು.

ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ – 2026ರ ಸಂದರ್ಭದಲ್ಲಿ ಕೆಳಕಂಡ ಸಾಧಕರಿಗೆ ಗೌರವ ಸನ್ಮಾನ ನೀಡಿ ಅಭಿನಂದಿಸಲಾಯಿತು:

  • ಬಿಪಿನ್ ಚಂದ್ರಪಾಲ್ – ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು
  • ಸೀತಾರಾಮ – ಮಾಜಿ ಪುರಸಭಾ ಅಧ್ಯಕ್ಷರು, ಕಾರ್ಕಳ
  • ಅವಿನಾಶ್ ಶೆಟ್ಟಿ – ಗೌರವಾಧ್ಯಕ್ಷರು, ಕ್ರಿಕೆಟ್ ಅಸೋಸಿಯೇಷನ್, ಕಾರ್ಕಳ
  • ಪವನ್ – ಚಿನ್ನದ ಪದಕ ವಿಜೇತ, 1ನೇ ಏಷ್ಯನ್ ಓಪನ್ ಅಂತಾರಾಷ್ಟ್ರೀಯ ಮುಕ್ತ ಟೇಕ್‌ವಾಂಡೋ ಚಾಂಪಿಯನ್‌ಶಿಪ್
  • ನೋಅ ಜೋ ಪಾಯಿಸ್ – ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾದ ಕ್ರೀಡಾಪಟು

ಕಾರ್ಕಳದ ಹಿರಿಯ ಟೀಮ್ ಪ್ರತಿನಿಧಿಗಳಾಗಿ ಸನ್ಮಾನಿಸಲ್ಪಟ್ಟವರು:

  • ಸತೀಶ್ ಆಚಾರ್ಯ – ವೆಸ್ಟೆರ್ನ್ ಕ್ರಿಕೆಟರ್ಸ್
  • ಗಫೂರ್ – ಬ್ರದರ್ಸ್ ಅಜೆಕಾರ್
  • ಸುರೇಶ್ ದೇವಾಡಿಗ – ನ್ಯೂಸ್ಟರ್ ಕ್ರಿಕೆಟರ್ಸ್
  • ಶರತ್ ಆಂಚನ್ – ಮಹಾಲಿಂಗೇಶ್ವರ

ಈ ಎಲ್ಲಾ ಸಾಧಕರು ಕ್ರೀಡೆ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸಾಧನೆಯ ಮೂಲಕ ಯುವಜನತೆಗೆ ಪ್ರೇರಣೆಯಾಗಿ ನಿಂತಿರುವ ಹಿನ್ನೆಲೆಯಲ್ಲಿ,ಯುವ ಕಾಂಗ್ರೆಸ್ ವತಿಯಿಂದ ಗೌರವಿಸಲಾಯಿತು.

ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ ಕೇವಲ ಕ್ರೀಡಾಕೂಟವಲ್ಲ; ಇದು ಯುವಜನತೆಯನ್ನು ಒಗ್ಗಟ್ಟಿನ ದಾರಿಯಲ್ಲಿ ಕೊಂಡೊಯ್ಯುವ ಚಳವಳಿಯ ಭಾಗವಾಗಿದೆ ಮತ್ತು ರಾಹುಲ್ ಗಾಂಧಿಯವರ ಭಾರತದ ಕಾಶ್ಮೀರದಿಂದ ಕನ್ನಾಕುಮಾರಿಯವರೆಗೆ ದೇಶದ ಒಡೆದ ಮನಸ್ಸುಗಳ ಒಗ್ಗುಡಿಸಲು ಸೌಹಾರ್ದತೆ ಮತ್ತು ಜನರ ಮದ್ಯೆ ಪ್ರೀತಿ ಹಂಚಲು ಹನ್ನಿಕೊಂಡಂತಹ ಬೃಹತ್ ಯಾತ್ರೆಯಾದ ಭಾರತ್ ಜೋಡೊ ದ ನೆನಪಿಗಾಗಿ ಹಮ್ಮಿಕೊಂಡಂತಹ ಈ ಪಂದ್ಯಾಕೂಟವಾಗಿದ್ದು ಮುಂದಿನ ದಿನಗಳಲ್ಲಿಯೂ ಇಂತಹ ವಿವಿಧತೆ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದರ ಜೊತೆಗೆ, ದೇಶದ ಸಂವಿಧಾನಾತ್ಮಕ ಮೌಲ್ಯಗಳು, ಸಹೋದರತ್ವ ಮತ್ತು ಸಾಮಾಜಿಕ ಏಕತೆಯನ್ನು ಬಲಪಡಿಸುವ ಕಾರ್ಯವನ್ನು ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಮುಂದುವರಿಸಲಿದೆ.

ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಭಾರತ್ ಜೋಡೋ ಕ್ರಿಕೆಟ್ ಟ್ರೋಫಿ – 2026 ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಲು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು ಉಪಸ್ಥಿತರಾಗಿ, ಕಾರ್ಯಕ್ರಮದ ಗೌರವ ಮತ್ತು ಘನತೆಯನ್ನು ಹೆಚ್ಚಿಸಿದ ರಾಜ್ಯದ ಜಿಲ್ಲೆಯ ,ತಾಲೂಕಿನ, ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರು, ಮಾರ್ಗದರ್ಶಕರು ಹಾಗೂ ಗಣ್ಯರಿಗೆ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್, ಕಾರ್ಕಳ ನಗರ ಯುವ ಕಾಂಗ್ರೆಸ್ ಹಾಗೂ ಕಾರ್ಕಳ NSUI ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೆವೆ.

ವಿಶೇಷವಾಗಿ ಈ ಮಹತ್ವದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ಸಂಘಟನೆಗಾಗಿ ಸರಕರಿಸಿದ ಹಾಗೂ ನೈತಿಕವಾಗಿ ಎಲ್ಲ ರೀತಿಯ ಬೆಂಬಲ ನೀಡಿದ ಎಲ್ಲಾ ಹಿರಿಯರಿಗೂ ,ಪಕ್ಷದ ಕಾರ್ಯಕರ್ತರು,ಹಾಗೂ ಬೆಂಬಲಿಗರಿಗೂ ಮತ್ತು ಸಹಕರಿಸಿದ ಕಾರ್ಕಳ ಕ್ರಿಕೆಟ್ ಅಸೋಶೆಯೆಶನ್ ಮತ್ತು ಇತರೆ ಸಂಘಟನೆಗಳಿಗೆ ಯುವ ಕಾಂಗ್ರೆಸ್ ಪರವಾಗಿ ಆಭಾರ ವ್ಯಕ್ತಪಡಿಸುತ್ತೇವೆ. ಅದೇ ರೀತಿ, ಮೂರು ದಿನಗಳ ಕಾಲ ಪಂದ್ಯಾವಳಿಯನ್ನು ವೀಕ್ಷಿಸಿ, ಆಟಗಾರರನ್ನು ಉತ್ತೇಜಿಸಿ, ಭಾರತ್ ಜೋಡೋ ಎಂಬ ರಾಷ್ಟ್ರೀಯ ಸಂದೇಶವನ್ನು ಬೆಂಬಲಿಸಿದ ಕಾರ್ಕಳ ಹಾಗೂ ಉಡುಪಿ ಜಿಲ್ಲೆಯ ಸಾರ್ವಜನಿಕರಿಗೆ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ.

ಈ ಯಶಸ್ವಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ತಂಡಗಳು, ಆಟಗಾರರು, ಸ್ವಯಂಸೇವಕರು, ಸಂಘಟಕರು, ಪೊಲೀಸ್ ಇಲಾಖೆ ಹಾಗೂ ಮಾಧ್ಯಮದ ಗೆಳೆಯರಿಗೆ ಉಡುಪಿ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿಯವರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page