
ಉಡುಪಿ ಅಜ್ಜರುಕಾಡುವಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ನಿಟ್ಟೆ ಪದವಿ ಪೂರ್ವ ಕಾಲೇಜಿನ ಪ್ರಣಯ್ ಶೆಟ್ಟಿ ಟ್ರಿಪಲ್ ಜಂಪ್ ಹಾಗೂ 200 ಮೀ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡಿರುತ್ತಾರೆ ಹಾಗೂ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕಗಳಿಸಿರುತ್ತಾರೆ ಮತ್ತು ರಿಲೇ ಓಟದಲ್ಲಿ ತೃತಿಯ ಸ್ಥಾನವನ್ನು ಪಡೆದು ಓವರ್ ಅಲ್ ಚಾಂಪಿಯನ್ಶಿಪ್ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ. ಇವರು ಪ್ರಶಾಂತ ಶೆಟ್ಟಿ ಕರಾವಳಿ ಹಾಗೂ ಸಾರಿಕಾರವರ ಪುತ್ರ.








