
ಉಡುಪಿ: ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿತದ ಪರಿಣಾಮ ನಿನ್ನೆ ಜು. 10, ಹಲವು ರೈಲುಗಳ ಸಂಚಾರ ವ್ಯತ್ಯಾಸವಾಗಿದೆ.
ಇಂದು ಜುಲೈ 11ರಂದು ಮಂಗಳೂರಿನಿಂದ ಮುಂಬೈಗೆ ಸಂಚರಿಸಬೇಕಾದ 12134 ಹಂಗೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ. ಇದಲ್ಲದೆ ಈ ಮಾರ್ಗದಲ್ಲಿ ಗೋವಾದಿಂದ ಮುಂಬೈ ಕಡೆ ಸಂಚರಿಸುವ ಹಾಗೂ ಮುಂಬೈಯಿಂದ ಗೋವಾ ಮಾರ್ಗವಾಗಿ ಉಡುಪಿ ಮಂಗಳೂರಿಗೆ ಸಂಚರಿಸುವ ರೈಲುಗಳ ಸಂಚಾರದಲ್ಲೂ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.





