
ಉಡುಪಿ: ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟದ ಜಿಲ್ಲಾ ಕಾರ್ಯಕರಿಣಿ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ಕಾಪು ದಂಡ ತೀರ್ಥ ಸಂಸ್ಥೆಯ ಡಾ|ಪ್ರಶಾಂತ್ ಶೆಟ್ಟಿ ಹಾಗೂ ಅಧ್ಯಕ್ಷರಾಗಿ ತ್ರಿಶಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಭಟ್ ನೇಮಕಗೊಂಡಿದ್ದಾರೆ.
ಉಪಾಧ್ಯಕ್ಷರಾಗಿ ಸುಜ್ಞಾನ ಸಂಸ್ಥೆಯ ರಮೇಶ್ ಶೆಟ್ಟಿ, ಎಕ್ಸಲೆಂಟ್ ಕುಂದಾಪುರದ ದೀಪಾ ಎಂ ಹೆಗಡೆ, ಅಮೃತ ಭಾರತಿ ಹೆಬ್ರಿಯ ಸತೀಶ್ ಪೈ, ರಾಜೇಶ್ವರಿ ಸಂಸ್ಥೆ ಕಾರ್ಯಕ್ರಮದ ದೇವಿ ಪ್ರಸಾದ್ ಶೆಟ್ಟಿ, ಖಜಾಂಚಿಯಾಗಿ ಜ್ಞಾನ ಸುಧಾ ಸಂಸ್ಥೆಯ ಡಾ| ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ಕ್ರಿಯೇಟಿವ್ ಸಂಸ್ಥೆಯ ಅಶ್ವಥ್ ಎಸ್ ಎಲ್, ಸಹಕಾರ್ಯದರ್ಶಿಗಳಾಗಿ ಕ್ರಿಯೇಟಿವ್ ಸಂಸ್ಥೆಯ ಡಾ| ಗಣನಾಥ ಶೆಟ್ಟಿ, ಸುಜ್ಞಾನ ಸಂಸ್ಥೆಯ ಪ್ರತಾಪ್ ಚಂದ್ರ ಶೆಟ್ಟಿ ಆಯ್ಕೆ ಆಗಿದ್ದಾರೆ.
ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಸಮಿತಿಯ ಗೌರವ ಉಪಾಧ್ಯಕ್ಷರಾದ ರಾಧಾಕೃಷ್ಣ ಶರಣೆ ಫಾದರ್ ವಿನ್ಸೆಂಟ್ ಕ್ರಾಸ್ತ, ಪ್ರೊ| ಆಲ್ಬಂಟ್ ರೋಡ್ರಿಗಸ್ (ದಂಡತೀರ್ಥ ಸಂಸ್ಥೆ,) ನಾಗರಾಜ್ ಶೆಟ್ಟಿ (ಎಸ್ ಆರ್ ಸಂಸ್ಥೆ ಹೆಬ್ರಿ), ಕೆಎಂಇಎಸ್ ಸಂಸ್ಥೆಯ ಇಮ್ತಿಯಾಜ್ ಭಾಗಿಯಾಗಿದ್ದು ನೂತನ ಪದಾಧಿಕಾರಿಗಳನ್ನು ಕೆಯುಪಿಎಂಎ ರಾಜ್ಯ ಸಮಿತಿಯ ಅಧ್ಯಕ್ಷ ಡಾ| ಮೋಹನ್ ಆಳ್ವಾ ಹಾಗೂ ಕಾರ್ಯದರ್ಶಿ ನರೇಂದ್ರ ನಾಯಕ್ ಶುಭ ಹಾರೈಸಿದರು.









