ಮಗಳನ್ನು ಮಂಗಳೂರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿ ಬರುವ ಸಂದರ್ಭ ಘಟನೆ

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಕ್ರೇನ್ ಡಿಕ್ಕಿ ಹೊಡೆದು ಪಾದ ಚಾರಿ ಮಹಿಳೆ ದಿವ್ಯ (45) ಮೃತಪಟ್ಟ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಮೃತಪಟ್ಟ ಕಾರವಾರ ಮೂಲದ ದಿವ್ಯ ಮಗಳಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಡಿಸ್ಚಾರ್ಜ್ ಗೊಂಡು ಕಾರವಾರದತ್ತ ಕಾರಿನಲ್ಲಿ ತೆರಳುತ್ತಿದ್ದರು. ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್ ಪಡೆದು ಗುಡ್ಡೆಯಂಗಡಿ ಬಳಿಯ ಹೋಟೆಲ್ ಗೆ ಉಪಹಾರಕ್ಕಾಗಿ ತೆರಳಿದ್ದು, ಆ ವೇಳೆ ಪುತ್ರಿ ಕ್ರಿಕೆಟ್ ಬ್ಯಾಟ್ ಬೇಕು ಎಂದಿದ್ದಕ್ಕೆ ಮತ್ತೆ ರಸ್ತೆಯನ್ನು ದಾಟುತ್ತಿರುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ.






















































