
ಉಡುಪಿ: ಅಂಬಲಪಾಡಿಯ ಗಾಂಧಿನಗರ ಮನೆವೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ ಹಿನ್ನೆಲೆ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ನ ಮಾಲೀಕರಾಗಿರುವ ರಮಾನಂದ್ ಶೆಟ್ಟಿ ಸಾವನ್ನಪ್ಪಿದ್ದು ಅವರ ಪತ್ನಿ ಮತ್ತು ಮಕ್ಕಳ ಗಾಯಗೊಂಡಿದ್ದಾರೆ.
ರಮಾನಂದ್ ಶೆಟ್ಟಿ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ರಮಾನಂದ್ ಶೆಟ್ಟಿ ಬೆಂಕಿಯ ಜ್ವಾಲೆಯಿಂದಾಗಿ ಪ್ರಜ್ಞೆ ತಪ್ಪಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸುತ್ತಿದ್ದು, ಪತ್ನಿ ಮತ್ತು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.





