27.2 C
Udupi
Wednesday, December 24, 2025
spot_img
spot_img
HomeBlogಇಪಿಎಫ್ಓ 3.O ನಿಯಮ ಜಾರಿ

ಇಪಿಎಫ್ಓ 3.O ನಿಯಮ ಜಾರಿ

ಕಾರ್ಮಿಕ ಸಚಿವ ಮಾನ್ಸುಕ್ ಮಾಂಡವೀಯ ನೇತೃತ್ವದಲ್ಲಿ ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ EPFO 3.0 ನಿಯಮ ಜಾರಿ ಮಾಡಲಾಗಿದೆ. ಕೆಲಸ ಬಿಟ್ಟ ಬಳಿಕ ಹಣ ಪಡೆಯಲು ಇದ್ದ ನಿಯಮಗಳಲ್ಲಿ ಸಡಿಲಿಕೆ, ಹಣ ಪಡೆಯುವ ವಿಧಾನ ಸರಳೀಕೃತ ಸೇರಿದಂತೆ ಹಲವು ನೀತಿಗಳಲ್ಲಿ ಸಡಿಲಿಕೆ ಮಾಡಿ ಪಿಎಫ್ ಸದಸ್ಯರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಹಣ ಪಡೆಯಲು ಈ ನಿಯಮ ರೂಪಿಸಲಾಗಿದೆ.

  • ಹೊಸ ಪಿಎಫ್ ನೀತಿ ಪ್ರಕಾರ ಉದ್ಯೋಗ ತೊರೆದ ತಕ್ಷಣವೇ ತಮ್ಮ ಪಿಎಫ್ ಹಣದ ಶೇಕಡಾ 75ರಷ್ಟು ಮೊತ್ತವನ್ನು ಹಿಂಪಡೆಯಲು ಸಾಧ್ಯವಿದ್ದು ಇನ್ನು ಸಂಪೂರ್ಣ ಮೊತ್ತವನ್ನು 12 ತಿಂಗಳ ಬಳಿಕ ಪಡೆಯಲು ಸಾಧ್ಯವಿದೆ. ಹಳೇ ನಿಯಮದಲ್ಲಿ ಒಂದು ತಿಂಗಳ ಬಳಿಕ ಶೇಕಡಾ 75ರಷ್ಟು ಹಾಗೂ ಇನ್ನುಳಿದ ಶೇಕಡಾ25 ರಷ್ಟು ಮೊತ್ತವನ್ನು 2 ತಿಂಗಳ ಬಳಿಕ ಪಡೆಯಬಹುದಾಗಿತ್ತು.
  • ಉದ್ಯೋಗ ಕಳೆದುಕೊಂಡ ಬಳಿಕ ಪಡೆಯುವ ಪಿಂಚಣಿ ಹಣ ಅವಧಿ 36 ತಿಂಗಳು ವಿಸ್ತರಣೆ ಮಾಡಲಾಗಿದೆ. ಹೊಸ 3.0 ನಿಯಮದ ಪ್ರಕಾರ ಇಪಿಎಪ್ ಕಾರ್ಪಸ್ ಮೊತ್ತದಲ್ಲಿ ಶೇಕಡಾ 75ರಷ್ಟು ಹಿಂಪಡೆಯಲು ಸಾಧ್ಯವಿದೆ.ಇನ್ನುಳಿದ ಶೇಕಡಾ 25ರಷ್ಟು ಮೊತ್ತವ್ನು ಮಿನಿಮಮ್ ಬ್ಯಾಲೆನ್ಸ್ ರೂಪದಲ್ಲಿ ಇಡಬೇಕು. 3 ತಿಂಗಳ ಬೇಸಿಕ್ ವೇಜಸ್, ಅಥವಾ ಡಿಎ ಹಿಂಪಡೆಯುವ ನಿಯಮದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ.
  • ಕೆಲ ತುರ್ತು ಸಂದರ್ಭದಲ್ಲಿ ಪಿಎಫ್ ಹಣ ಹಿಂಪಡೆಯುವ ಮಿತಿ 5,000 ರೂಪಾಯಿ ಅಥವಾ ಉದ್ಯೋಗಿಯ ಪಿಎಫ್ ಕೊಡುಗೆಯ ಶೇಕಡಾ 50 ರಷ್ಟು ಹಣ , ಇದರಲ್ಲಿ ಯಾವುದು ಕಡಿಮೆ ಮೊತ್ತ ಅದು ಹಿಂಪಡೆಯ ಬಹುದಿತ್ತು. ಆದರೆ ಇದೀಗ ಯಾವುದೇ ಅಲ್ಪ ಪ್ರಮಾಣ ಅಥವಾ ಪಾರ್ಶಿಯಲ್ ಮೊತ್ತ ಪಡೆಯಲು ಕನಿಷ್ಠ 12 ತಿಂಗಳು ಪೂರ್ತಿಯಾಗಿರಬೇಕು.
  • ಈ ಹಿಂದೆ ವೈದ್ಯಕೀಯ ತುರ್ತು ಅಗತ್ಯಕ್ಕಾಗಿ ಉದ್ಯೋಗಿಯ ಪಿಎಫ್ ಕೊಡುಗೆಯಿಂದ 6 ತಿಂಗಳ ವರೆಗಿನ ಬೇಸಿಗ್ ವೇಜಸ್, ಡಿಎ ಮೊತ್ತ ಪಡೆಯಲು ಸಾಧ್ಯವಿತ್ತು. ಈ ನಿಯಮನ್ನು ಉಳಿಸಿಕೊಂಡಿದ್ದು ಆದರೆ ಉದ್ಯೋಗಿ ಕನಿಷ್ಠ 12 ತಿಂಗಳ ಸೇವೆ ಸಲ್ಲಿಸಿರಬೇಕು ಎಂಬ ನಿಯಮ ರೂಪಿಸಲಾಗಿದೆ.
  • ಶಿಕ್ಷಣ ಹಾಗೂ ಮದುವೆಗಾಗಿ ಈ ಹಿಂದೆ 7 ವರ್ಷ ಪೂರೈಸಿರುವ ಉದ್ಯೋಗಿ ಶೇಕಡಾ 50 ರಷ್ಟು ಮೊತ್ತವನ್ನು 3 ಬಾರಿ ಶಿಕ್ಷಣಕ್ಕಾಗಿ 2 ಬಾರಿ ಮದುವೆಗಾಗಿ ಹಿಂಪಡೆಯಬಹುದಿತ್ತು. ಆದರೆ ಹೊಸ ನೀತಿಯಲ್ಲಿ 10 ಬಾರಿ ಶಿಕ್ಷಣಕ್ಕೆ, 5 ಬಾರಿ ಮದುವೆಗೆ ಪಡೆಯಲು ನಿಯಮ ತರಲಾಗಿದೆ.
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page