
ಬೆಂಗಳೂರು: ಸರ್ಕಾರ SSLC ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ನೀಡಿದ್ದು ಅದೇನೆಂದರೆ ಇನ್ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ 33% ಅಂಕ ಪಡೆದರೆ ಉತ್ತೀರ್ಣ ಎಂದು ಘೋಷಿಸಲಾಗುವುದು ಎಂದು ಸರ್ಕಾರ ಕರಡು ಆದೇಶ ಹೊರಡಿಸಿದೆ.
ಸರ್ಕಾರವು ಈಗ ಇರುವ ಉತ್ತೀರ್ಣ ನಿಯಮ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದು, ಆಂತರಿಕ ಮೌಲ್ಯಮಾಪನ, ಬಾಹ್ಯ ಪರೀಕ್ಷೆ ಸೇರಿ 33% ಅಂಕ ಗಳಿಸಿದ್ರೆ ವಿದ್ಯಾರ್ಥಿಗಳು ಪಾಸ್ ಎಂದು ಪರಿಗಣಿಸಲಾಗುವುದು. ಅಂದರೆ 625 ಅಂಕಗಳಿಗೆ ಕನಿಷ್ಠ 206 ಅಂಕ ಗಳಿಸಬೇಕು. ಜೊತೆಗೆ ಆಯಾ ವಿಷಯದಲ್ಲಿ ಒಟ್ಟು ಅಂಕಗಳಲ್ಲಿ ಕನಿಷ್ಠ 30% ಅಂಕಗಳು ಪಡೆದರೆ ಅಂತಹ ವಿದ್ಯಾರ್ಥಿಯೂ ಪಾಸ್ ಅಂತ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಶಿಕ್ಷಣ ಇಲಾಖೆಯು ಈ ಬದಲಾವಣೆಯ ವಿರುದ್ಧ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿದ್ದು ಬಳಿಕ ಸರ್ಕಾರ ಅಧಿಕೃತ ಆದೇಶ ಹೊರಡಿಸಲಿದೆ ಎಂದು ತಿಳಿದು ಬಂದಿದೆ.





