
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವಿಟರ್ ಖಾತೆಯಲ್ಲಿ ದಿಲ್ಲಿಯಲ್ಲಿರುವ ವಿಜಯ ಕಮಾನು ‘ಇಂಡಿಯಾ ಗೇಟ್’ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವಾಷಿಂಗ್ಟನ್ ಡಿಸಿಯಲ್ಲಿ ಇದಕ್ಕಿಂತಲೂ ಭವ್ಯವಾದ ವಿಜಯ ಕಮಾನು ನಿರ್ಮಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
“ಭಾರತದ ಈ ವಿಜಯ ಕಮಾನು ಅತ್ಯಂತ ಸುಂದರವಾಗಿದೆ. ಅಮೆರಿಕದಲ್ಲಿ ನಿರ್ಮಿಸುವ ಕಮಾನು ಇನ್ನೂ ಅದ್ಭುತವಾಗಿರಲಿದೆ” ಎಂದು ಹೇಳಿರುವ ಅವರು ವಾಷಿಂಗ್ಟನ್‌ನಲ್ಲಿ ವಿಜಯ ಕಮಾನು ನಿರ್ಮಿಸುವ ಆಲೋಚನೆ ಬಹಳ ಹಿಂದಿನಿಂದಲೇ ಇದ್ದು, ಇದನ್ನು ಸ್ವಾತಂತ್ರ್ಯದ ಸಂಕೇತವಾಗಿ ರೂಪಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.
ಅಮೆರಿಕದಲ್ಲಿ ವಿಶ್ವದ ಅತಿದೊಡ್ಡ ವಿಜಯ ಕಮಾನು ನಿರ್ಮಿಸುವ ಉದ್ದೇಶವನ್ನು ಮತ್ತೆ ಪುನರುಚ್ಚರಿಸಿದ ಟ್ರಂಪ್, ಈ ಸ್ಮಾರಕವು ದೇಶದ ಗೌರವ ಮತ್ತು ಹೆಮ್ಮೆಯ ಪ್ರತೀಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಗತ್ತಿನ ಕನಿಷ್ಠ 57 ನಗರಗಳಲ್ಲಿ ಈಗಾಗಲೇ ವಿಜಯ ಕಮಾನುಗಳಿರುವುದನ್ನು ಉಲ್ಲೇಖಿಸಿದ ಟ್ರಂಪ್, ಆದರೆ ವಾಷಿಂಗ್ಟನ್‌ನಂತಹ ಪ್ರಮುಖ ರಾಜಧಾನಿಯಲ್ಲಿ ಇನ್ನೂ ಇಂತಹ ಕಮಾನು ಇಲ್ಲ ಎಂಬುದನ್ನು ಸೂಚಿಸಿದರು.



















