
ಮಹೇಂದ್ರಗಢ : ಬುಧವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರ್ಯಾಣದಲ್ಲಿ ತಮ್ಮ ಮೊದಲ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದು ಈ ವೇಳೆ ‘ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಸೈನಿಕರನ್ನು ಕಾರ್ಮಿಕರನ್ನಾಗಿ ಪರಿವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿ, ‘ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಅಗ್ನಿವೀರ್ ಯೋಜನೆಯನ್ನು ತೆಗೆದು ಕಸದ ಬುಟ್ಟಿಗೆ ಎಸೆಯುತ್ತೇವೆ’ ಎಂದು ಹೇಳಿದ್ದಾರೆ.
‘ನಮ್ಮ ದೇಶದ ಯುವಕರ ಡಿಎನ್‌ಎಯಲ್ಲಿ ದೇಶಭಕ್ತಿಯಿದೆ. ಭಾರತದ ಗಡಿಗಳು, ದೇಶದ ಯುವಕರಿಂದ ಸುರಕ್ಷಿತವಾಗಿದೆ. ಹುತಾತ್ಮರಲ್ಲಿ ಎರಡು ವಿಧ. ಒಂದು ಸಾಮಾನ್ಯ ಯೋಧ ಮತ್ತು ಅಧಿಕಾರಿ. ಅಧಿಕಾರಿಗಳಿಗೆ ಪಿಂಚಣಿ, ‘ಹುತಾತ್ಮ’ ಪಟ್ಟ ಸಿಗುವುದು ಸೇರಿದಂತೆ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಆದರೆ ಅಗ್ನಿವೀರ್‌ನಲ್ಲಿ ಆಯ್ಕೆಯಾದ ಯೋಧನಿಗೆ ಪಿಂಚಣಿ ಇಲ್ಲ, ಹುತಾತ್ಮ ಸ್ಥಾನವೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ರಾಹುಲ್ ಗಾಂಧಿ ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ ಈ ಅಗ್ನಿವೀರ್ ಯೋಜನೆಯನ್ನು ತೆಗೆದುಹಾಕಿ ಹಳೆ ನೇಮಕಾತಿ ವಿಧಾನವನ್ನೇ ಮರುಜಾರಿಗೆ ಮಾಡುತ್ತೇವೆ ಎಂದು ಹೇಳಿದರು.