
ಹೊಸದಿಲ್ಲಿ: ಕೇಂದ್ರ ಸರಕಾರವು ಫಾಸ್ಟಾಗ್ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ತಂದಿದ್ದು ಆ.1ರಿಂದ ನೂತನ ನಿಯಮಗಳು ಅನ್ವಯವಾಗಲಿವೆ.
ಈ ಹೊಸ ನಿಯಮಗಳ ಪ್ರಕಾರ, 3 ಅಥವಾ 5 ವರ್ಷಗಳ ಹಿಂದೆ ನೀಡಿರುವ ಎಲ್ಲಾ ಫಾಸ್ಟಾಗ್‌ಗಳ ಕೆವೈಸಿ ಅನ್ನೂ ವಿತರಕ ಸಂಸ್ಥೆಗಳು ಅ.31ರ ಒಳಗಾಗಿ ಪೂರ್ಣಗೊಳಿಸಬೇಕು.
5 ವರ್ಷಕ್ಕಿಂತ ಹಳೆಯದಾದ ಫಾಸ್ಟಾಗ್‌ಗಳನ್ನು ಬದಲಿಸಬೇಕು. ಎಲ್ಲ ಫಾಸ್ಟಾಗ್ ಗಳಿಗೂ ವಾಹನಗಳ ನೋಂದಣಿ ನಂಬರ್, ಚಾಸ್ಸಿ ನಂಬರ್ ಲಿಂಕ್ ಆಗಿರಬೇಕು. ಹೊಸದಾಗಿ ವಾಹನ ಖರೀದಿ ಮಾಡಿದವರು 90 ದಿನಗಳ ಒಳಗೆ ಫಾಸ್ಟಾಗ್‌ಗೆ ನೋಂದಣಿ ಸಂಖ್ಯೆ ಲಿಂಕ್ ಮಾಡಬೇಕು. ಎಲ್ಲ ಫಾಸ್ಟಾಗ್‌ಗಳಿಗೂ ಮೊಬೈಲ್ ನಂಬರ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು
ವಿತರಕರು ತಮ್ಮೆಲ್ಲ ದತ್ತಾಂಶಗಳನ್ನು ಪರಿಶೀಲಿಸಿ ಅಪ್‌ಡೇಟ್ ಮಾಡಬೇಕಿದೆ. ಜತೆಗೆ ಫಾಸ್ಟ್ ಟ್ಯಾಗ್ ಅಳವಡಿಸಿರುವ ಪ್ರತಿಯೊಂದು ವಾಹನದ ಫ್ರಂಟ್ ಮತ್ತು ಸೈಡ್‌ನ ಸ್ಪಷ್ಟ ಫೋಟೋಗಳನ್ನೂ ಅಪ್‌ಲೋಡ್ ಮಾಡಬೇಕು.