
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ‘ಭಾಗೀದಾರಿ ನ್ಯಾಯ್ ಸಮ್ಮೇಳನದಲ್ಲಿ , ಮೋದಿ, ಆರ್‌ಎಸ್‌ಎಸ್, ಬಿಜೆಪಿ ವಿರುದ್ಧ ಕಿಡಿಕಾರಿದ್ದು ಈ ವೇಳೆ ಆರ್‍ಎಸ್‍ಎಸ್ ವಿಷವಿದ್ದಂತೆ. ಅದರ ರುಚಿ ನೋಡಿದ್ರೆ ಸತ್ತು ಹೋಗ್ತೀರಿ ಎಂದು ಹೇಳಿದ್ದಾರೆ.
ಆರ್‍ಎಸ್‍ಎಸ್, ಬಿಜೆಪಿ ಜನರನ್ನು ವಿಭಜನೆ ಮಾಡುತ್ತದೆ. ಇವರ ವಿರುದ್ಧ ಎಸ್‍ಸಿ, ಎಸ್‍ಟಿ ಒಬಿಸಿಯವರು ಒಗ್ಗಟ್ಟಿನಿಂದ ಹೋರಾಡಬೇಕು. ಮೋದಿ ಮೇಲ್ಜಾತಿಯ ಸಮುದಾಯಕ್ಕೆ ಸೇರಿದವರಾಗಿದ್ದರೂ ತಮ್ಮನ್ನು ಹಿಂದುಳಿದವರು ಎಂದು ಕರೆದುಕೊಳ್ಳುತ್ತಾರೆ. ಅವರು ಮುಖ್ಯಮಂತ್ರಿಯಾದ ನಂತರವೇ ಯಾರಿಗೂ ತಿಳಿಯದಂತೆ ತಮ್ಮ ಸಮುದಾಯವನ್ನು ಹಿಂದುಳಿದವರ ಪಟ್ಟಿಗೆ ಸೇರಿಸಿದರು. ವಾಸ್ತವವಾಗಿ, ನಮ್ಮಲ್ಲಿ ಹೆಚ್ಚಿನವರಿಗೆ ಅವರು ಪ್ರಧಾನಿಯಾದ ನಂತರ ಈ ವಿಚಾರ ತಿಳಿಯಿತು ಎಂದು ಹೇಳಿದ್ದಾರೆ.





