30.8 C
Udupi
Tuesday, April 7, 2026
spot_img
spot_img
HomeBlogಆರ್‌ಎಸ್‌ಎಸ್ ಎಂದರೆ ಅದು "ರಾಷ್ಟ್ರೀಯ ಸುಳ್ಳು ಸಂಘಟನೆ" : ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್

ಆರ್‌ಎಸ್‌ಎಸ್ ಎಂದರೆ ಅದು “ರಾಷ್ಟ್ರೀಯ ಸುಳ್ಳು ಸಂಘಟನೆ” : ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್

spot_imgspot_img

ದಾವಣಗೆರೆ: ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಆರ್‌ಎಸ್‌ಎಸ್ ಅನ್ನು “ರಾಷ್ಟ್ರೀಯ ಸುಳ್ಳು ಸಂಘಟನೆ” ಎಂದು ಕರೆಯುತ್ತಾ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವು ಎಲ್ಲ ಸಮುದಾಯಗಳ ಸಹಜ ಸಹಬಾಳ್ವೆಯ ನೆಲೆಯಾಗಿದ್ದು, ಇಲ್ಲಿ ದ್ವೇಷದ ರಾಜಕೀಯ ಮಾಡಲು ಬಿಜೆಪಿ ಯತ್ನಿಸುತ್ತಿದೆ. ಜನರಿಗೆ ಶಿಕ್ಷಣ, ಆರೋಗ್ಯ ಮತ್ತು ಶಾಂತಿ ಮುಖ್ಯ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇನ್ನೂ ರಾಜಕೀಯದಲ್ಲಿ ಆರಂಭಿಕ ಹಂತದಲ್ಲಿದ್ದಾರೆ ಎಂದು ಟೀಕಿಸಿದ ಅವರು, ಅಲ್ಪಸಂಖ್ಯಾತರ ರಕ್ಷಣೆಯ ಬಗ್ಗೆ ಅವರ ಮಾತು ವಿಶ್ವಾಸಾರ್ಹವಲ್ಲ ಎಂದರು. ನೆಹರು ಕಾಲದ ಅಲಿಪ್ತ ನೀತಿಯನ್ನು ಕೇಂದ್ರ ಸರ್ಕಾರ ಬದಲಿಸಿರುವುದರಿಂದ ವಿದೇಶಾಂಗ ಸಂಬಂಧಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಹೇಳಿಕೆಗಳನ್ನೂ ತರಾಟೆಗೆ ತೆಗೆದುಕೊಂಡ ಹರಿಪ್ರಸಾದ್, ಅವರ ಕನ್ನಡದ ಪಾಂಡಿತ್ಯದ ಬಗ್ಗೆ ವ್ಯಂಗ್ಯವಾಡಿದರು. ಹಿಂದಿಯನ್ನು ಹೇರಿಕೆ ಮಾಡಬಾರದು ಎಂಬುದು ನಮ್ಮ ನಿಲುವು, ಆದರೆ ಯಾವುದೇ ಭಾಷೆಯ ಕಲಿಕೆಗೆ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಪಸಂಖ್ಯಾತರ ವಿಚಾರದಲ್ಲಿ ಬಿಜೆಪಿ ನಾಟಕೀಯ ಕಾಳಜಿ ತೋರಿಸುತ್ತಿದೆ ಎಂದು ಆರೋಪಿಸಿದ ಅವರು, ತಮ್ಮ ಆಡಳಿತದ ಅವಧಿಯಲ್ಲಿ ಹಲಾಲ್, ಹಿಜಾಬ್ ಮುಂತಾದ ವಿವಾದಗಳನ್ನು ಸೃಷ್ಟಿಸಿದ ಪಕ್ಷವೇ ಈಗ ಮುಸ್ಲಿಮರ ಪರವಾಗಿ ಮಾತನಾಡುತ್ತಿದೆ ಎಂದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page