
ಆನೇಕಲ್: ಆನೇಕಲ್ ತಾಲೂಕಿನ ಹಳೆ ಚಂದಾಪುರದ ಹೊಸೂರು-ಬೆಂಗಳೂರು ಹೈವೇಗೆ ಹೊಂದಿಕೊಂಡಿರುವ ರೈಲ್ವೆ ಬ್ರಿಡ್ಜ್ ಬಳಿ ನೀಲಿ ಬಣ್ಣದ ಸೂಟ್ಕೇಸ್ ನಲ್ಲಿ 18 ವರ್ಷ ವಯಸ್ಸಿನ ಯುವತಿಯ ಶವ ಪತ್ತೆಯಾಗಿದೆ.
ಗುಲಾಬಿ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ ಯುವತಿಯ ಕೈಕಾಲುಗಳನ್ನು ಮಡಚಿ ಇಡೀ ದೇಹವನ್ನು ಸೂಟ್ಕೇಸ್ ಒಳಗೆ ತುಂಬಲಾಗಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.









