
ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಸಂಘ ದ ಉದ್ಘಾಟನೆ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಿತು . ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ , ಮಾಹೆ ಮಣಿಪಾಲ್ ಇದರ ರಿಸರ್ಚ್ ಸ್ಕಾಲರ್ ಅತುಲ್ ಭಟ್ , ಸಂಘ ಉದ್ಘಾಟಿಸಿ, ವೈಜ್ಞಾನಿಕ ಇತಿಹಾಸದ ಹಿನ್ನಲೆ ಎನ್ನುವ ವಿಷಯದ ಮೇಲೆ ಮಾತನಾಡಿ , ಹೆಚ್ಚಿನ ವಿದ್ಯಾರ್ಥಿಗಳಿಗೆ ವಿಜ್ಞಾನಿಯಾಗುವ ಸಾಮರ್ಥ್ಯವಿರುತ್ತದೆ , ಆದರೆ ಅದರ ಅರಿವು ವಿದ್ಯಾರ್ಥಿಗಳಿಗೆ ಇರುವುದಿಲ್ಲ .ಅದರ ಅರಿವು ವಿದ್ಯಾರ್ಥಿ ಜೀವನದಲ್ಲೇ ಆಗಬೇಕು . ಆ ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಯತ್ನ ಸಾಗಬೇಕು ಆಗ ಮಾತ್ರ ವಿಜ್ಞಾನಿಗಳ ಸಂಖೆ ಹೆಚ್ಚುತ್ತದೆ . ವಿಜ್ಞಾನಿಗಳು ಹಲವು ತಪ್ಪು ಗಳನ್ನು ಎಸಗಿದ ನಂತರವೇ ವಿಜ್ಞಾನದ ಅನೇಕ ಆವಿಷ್ಕಾರಗಳು ಜನ್ಮ ತಳೆದಿದ್ದು. ಮೈಕಲ್ ಪ್ಯಾರಡೆಗೆ ಜೀವನದಲ್ಲಿ ದೊಡ್ಡ ಗುರಿ ಇರಲಿಲ್ಲ . ಆದರೆ ಅವರು ಮಾಡುವ ಕೆಲಸದಲ್ಲಿ ಹೊಸತನವನ್ನು ತರಲು ಪ್ರಯತ್ನಿಸುತ್ತಿದ್ದರು . ಅದು ಅವರ ಸಾಧನೆಗೆ ಮಾರ್ಗ ವಾಯಿತು . ಜ್ಞಾನಿಗೂ ವಿಜ್ಞಾನಿಗೂ ಬಹಳ ದೊಡ್ಡ ಅಂತರವಿಲ್ಲ ಎಂದರು . ಪ್ರಾಂಶುಪಾಲರಾದ ಅಮರೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿ ಗಳಾದ ನೂತನ್ ಜಿ. , ಇಂಪಾ ಕೆ.ಪಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರಾವ್ಯ ಪಿ. ಸ್ವಾಗತಿಸಿ , ಪ್ರತೀಕ್ಷಾ ಅತಿಥಿಗಳನ್ನು ಪರಿಚಯಿಸಿ , ಸಾನಿಕ ವಂದಿಸಿದರು. ಸಿಂಚನ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು . ವಿಜ್ಞಾನ ಸಂಘದ ಸಂಯೋಜಕರಾದ ಡಾ . ಸುದರ್ಶನ್ ಶೆಟ್ಟಿ ಮತ್ತು ನಾಗರಾಜ್ ಶೆಟ್ಟಿ , ಉಪನ್ಯಾಸಕ ವೃಂದದವರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.








