
ಅಜೆಕಾರು ಗ್ರಾಮದ ದಿ| ರಾಜು ಮತ್ತು ಸುಲೋಚನಾ ಅವರ ಪುತ್ರ ಸಂಧೀಶ್ ಎಂಬವರು ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ವೇಳೆ ತೀವ್ರ ಲಾರಿ ಅಪಘಾತಕ್ಕೆ ಒಳಗಾಗಿದ್ದು ಪರಿಣಾಮ ದೇಹದ ಪ್ರಮುಖ ಹಿಂಭಾಗದ Alpa spinal cord ಭಾಗಕ್ಕೆ ಗಂಭೀರ ಗಾಯವಾಗಿದೆ.
ಇದರಿಂದ ದೇಹದ ಪ್ರಮುಖ ಭಾಗಗಳನ್ನು ಸಂಪರ್ಕಿಸುವ ನರಗಳು ಹಾನಿಗೊಂಡಿದ್ದು ಪ್ರಸ್ತುತ ನಡೆಯಲು ಅಸಮರ್ಥರಾಗಿದ್ದಾರೆ. ಪ್ರಸ್ತುತ AJ ಆಸ್ಪತ್ರೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಈಗಾಗಲೇ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಮುಂದಿನ ಎರಡು ತಿಂಗಳುಗಳ ಕಾಲ ನಿಗಾದಾರಿ ಮತ್ತು ದೀರ್ಘಾವಧಿಯ ಫಿಸಿಯೋಥೆರಪಿ ಅಗತ್ಯ ಇರುವುದರಿಂದ ಇದಕ್ಕೆ ಸುಮಾರು 40 ರಿಂದ 45 ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ.
ಕುಟುಂಬವು ಆರ್ಥಿಕವಾಗಿ ದುರ್ಬಲರಾಗಿದ್ದು ಹೀಗಾಗಿ ಎಲ್ಲರೂ ಸಹಾಯ ಹಸ್ತವನ್ನು ನೀಡಿ ಸಂಧೀಶ್ ಅವರ ಚೇತರಿಕೆಗೆ ನೆರವಾಗಬೇಕೆಂದು ಈ ಮೂಲಕ ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9886977669 / 9686109019 ಗೆ ಕರೆ ಮಾಡಬಹುದಾಗಿದೆ.



















































