
ಮುಂಬೈ: ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅವರ ಮದುವೆ ಸಮಾರಂಭ ಅದ್ದೂರಿಯಾಗಿ ಮುಗಿದಿದ್ದು, ಇಂದು ರಿಸೆಪ್ಷನ್ ಕಾರ್ಯಕ್ರಮವಿದೆ. ಆದರೆ ಈ ವಿವಾಹ ಸಮಾರಂಭದ ಸ್ಥಳಕ್ಕೆ ಬಾಂಬ್ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಈ ವಿವಾಹ ಸಮಾರಂಭಕ್ಕೆ ವಿಶ್ವದೆಲ್ಲೆಡೆಯಿಂದ ಗಣ್ಯಾತಿಗಣ್ಯರು, ಉದ್ಯಮ ಲೋಕದ ಪ್ರಮುಖರು, ಹಾಲಿವುಡ್ ನಟ ನಟಿಯರು, ವಿವಿಧ ದೇಶದ ರಾಜಕಾರಣಿಗಳು, ಪಾಪ್ ಗಾಯಕರು, ಬಾಲಿವುಡ್ ಹಾಗೂ ದಕ್ಷಿಣ ಸಿನಿಮಾ ರಂಗದ ತಾರೆಯರು, ಕ್ರೀಡಾಪಟುಗಳು ಹೀಗೆ ಒಬ್ಬರನ್ನು ಬಿಡದೇ ಎಲ್ಲರನ್ನೂ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ತಮ್ಮ ಮನೆಯಲ್ಲಿ ನಡೆಯುತ್ತಿರುವ ಕೊನೆ ಪುತ್ರನ ಮದುವೆಗೆ ಆಹ್ವಾನಿಸಿದ್ದರು.
ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಯಾರೋ ಕಿಡಿಗೇಡಿಗಳು ಅಂಬಾನಿ ಮದುವೆ ಸಮಾರಂಭದ ಕಾರ್ಯಕ್ರಮದಲ್ಲಿ ಬಾಂಬ್ ಇದೆ ಎನ್ನುವಂತೆ ಪೋಸ್ಟ್ ಮಾಡಿದ್ದು ಮುಂಬೈ ಪೊಲೀಸರಿಗೆ ಆತಂಕವನ್ನುಂಟು ಮಾಡಿದೆ.
ಇದೊಂದು ನಕಲಿ ಬಾಂಬ್ ಬೆದರಿಕೆ ಪೋಸ್ಟ್ ಎಂದು ಹೇಳುತ್ತಿದ್ದು ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಮದುವೆ ಮನೆಯ ಆವರಣದಲ್ಲಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿ ಈ ಪೋಸ್ಟ್ ಹಿಂದಿರುವ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದಾರೆ.
ಬಾಂಬ್ ಬೆದರಿಕೆ ಪೋಸ್ಟ್ ನಲ್ಲಿರುವ ಮುಖ್ಯಾಂಶ:
ಅಂಬಾನಿ ಅವರ ಕುಟುಂಬದ ಮದುವೆಗೆ ಹೋದರೆ ನಾಳೆ ಅರ್ಧದಷ್ಟು ಪ್ರಪಂಚ ತಲೆಕೆಳಗಾಗಿ ಹೋಗುತ್ತದೆ ಎಂದು ನನ್ನ ಮನಸ್ಸು ನಾಚಿಕೆಯಿಲ್ಲದೆ ಆಶ್ಚರ್ಯ ಪಡುತ್ತಿದೆ. ಒಂದು ಪಿನ್ ಕೋಡ್‌ನಲ್ಲಿ ಟ್ರಿಲಿಯನ್‌ಗಟ್ಟಲೆ ಡಾಲರ್‌ಗಳು ಎಂದು ಪೋಸ್ಟ್ ಮಾಡಲಾಗಿದೆ





