
ಕಾರ್ಕಳ, ನ.8: ಸೆಲ್ಕೋ ಸೊಲಾರ್‌ನ ಕಾರ್ಕಳ ಪ್ರತಿನಿಧಿ ಪುನೀತ್ ಕುಮಾರ್ ಶೆಟ್ಟಿ (38) ಶನಿವಾರ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ರಾತ್ರಿ ಹೃದಯಘಾತವಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಅವರು ಶನಿವಾರ ಬೆಳಿಗ್ಗೆ ನಿಧನರಾದರು.
ಪುನೀತ್ ಶೆಟ್ಟಿ ಅವರು ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳ ಸರಕಾರಿ ಆಸ್ಪತ್ರೆಗಳು, ಶಾಲೆಗಳು ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸೌರ ವಿದ್ಯುತ್ ಅಳವಡಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿ ಯಾಗಿದ್ದರು.







