ಕವನ
ಸಾವಿತ್ರಿ ಮನೋಹರ್,ಕಾರ್ಕಳ

ಹೊತ್ತಲ್ಲದ ಹೊತ್ತಿನಲ್ಲಿ ಇಳೆಗೆ ಇಳಿದಿದೆ ಮಹಾಮಳೆ
ಧರೆ ಕುಸಿದಿದೆ ಕಡಲುಕ್ಕಿ ದೆ ಇಳೆಯ ತುಂಬಾ ಗೋಳು.l
ಜಡಿಯುವ ಜಿನುಗುವ ಈ ಮಳೆಗೆ
ಜಡಗಟ್ಟಿದೆ ಹೃದಯ
ಮಂಜು ಮುಸುಕಿದ ದಾರಿಯೆಲ್ಲ
ಸಂಜೆ ಗತ್ತಲ ಮೋಡ
ಬೇಸರದಲ್ಲಿಮನಹೆಪ್ಪುಗಟ್ಟಿದೆ
ಬೀಸುತ್ತಿದೆ ಬಿರುಗಾಳಿ
ಸಂಕಷ್ಟದ ಒತ್ತಡದಲಿಸಿಲುಕಿ
ಮನ ಮರಗಟ್ಟಿಹುದು..l
ಭತ್ತದ ಬೆಳೆ ಕೊಚ್ಚಿ ಹೋಗಿದೆ
ಬಿಡದೆ ಸುರಿದ ಮಳೆಯಲಿ
ಹಸಿದ ಹೊಟ್ಟೆಗೆ ಅನ್ನವಿಲ್ಲದೆ
ಕಂಗಾಲಾಗಿವೆ ಕೂಸುಗಳು..l
ಉಸಿರಾಡಲೂ ತ್ರಾಣವಿಲ್ಲದ
ಅಸಹಾಯಕ ಜೀವಿಗಳು
ಬದುಕಿ ಸತ್ತಿಹ ಅರೆ ಬಿತ್ತಲೆ
ಜೀವಂತ ಶವಗಳು..l
ಭೈರವನ ಬಿಗಿ ಹತಿಗೆ
ಬಿರಿಯುತ್ತಿದೆ ಬಾನು
ಭೋರ್ಗರೆಯುತ ಮೊಗವೆತ್ತಿದೆ
ಜಡಿ ಮಳೆಗೆ ಕಡಲು..l
ಹರಿಯುತ್ತಿದೆ ಕೊರೆಯುತ್ತಿದೆ
ಭುವಿಯ ಒಡಲು
ಉಳಿವುದೇನು ನಮ್ಮ ಭೂಮಿ
ಉತ್ತುಬಿತ್ತಿ ಬಾಳಲು..l

ಸಾವಿತ್ರಿ ಮನೋಹರ್.
ಕಾರ್ಕಳ





















































