ತಾಲೂಕಿನ 90% ಅಧಿಕ ಅಂಕ ಪಡೆದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅವಕಾಶ

ಅಂಬಾಭವಾನಿ ಕ್ರಾಕರ್ಸ್ ಕಾರ್ಕಳ, ಈ ಬಾರಿಯ ದೀಪಾವಳಿ ಹಬ್ಬದ ಪ್ರಯುಕ್ತ ನಡೆಸಿದ ಪಟಾಕಿ ಮಾರಾಟದಲ್ಲಿ ಬಂದ ಲಾಭಾಂಶದಲ್ಲಿ ಈ ಬಾರಿ ಸರಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 90 ಕ್ಕಿಂತ ಅಧಿಕ ಅಂಕ ಪಡೆದ ಕಾರ್ಕಳ ತಾಲೂಕಿನ ಆಟೋ ಚಾಲಕರ 50 ಮಂದಿ ಮಕ್ಕಳಿಗೆ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ( ರಿ.) ಮೂಲಕ ತಲಾ ರೂ. 5 ಸಾವಿರದಂತೆ ಒಟ್ಟು ರೂಪಾಯಿ 2,50,000 ಮೊತ್ತ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಲಾಗಿದೆ.
2024 ನೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 90 ಕಿಂತ ಹೆಚ್ಚಿನ ಅಂಕ ಪಡೆದ ಆಟೋ ಚಾಲಕರ ಮಕ್ಕಳು ಮತ್ತು ಪೋಷಕರು ಸಂಸ್ಥೆಯನ್ನು ಸಂಪರ್ಕಿಸಿ ವಿವರಗಳನ್ನು ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ , ಅವಿನಾಶ್ ಶೆಟ್ಟಿ: 9844552182






















































