
ಗುರುದೇವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ದಿವ್ಯ ಆಶೀರ್ವಾದದಿಂದ, ನಮ್ಮ ಶಾಲೆಯು ಸಮೃದ್ಧಿ,ಸಂತೋಷದಿಂದ ತುಂಬಿ ತುಳುಕುತ್ತಿರಲಿ ,ಅವರ ದೃಷ್ಟಿಕೋನವು ನಮ್ಮ ಮಕ್ಕಳಿಗೆ ಜ್ಞಾನ,ಸಂತೋಷ ಹಾಗೂ ಆಂತರಿಕ ಬಲವನ್ನು ಬೆಳೆಸುತ್ತಾ ಸ್ಪೂರ್ತಿಯನ್ನು ನೀಡುವಂತಾಗಲಿ ಹಾಗೂ ಅವರ ಆಶೀರ್ವಾದದಿಂದ ಪ್ರತಿ ವಿದ್ಯಾರ್ಥಿಯ ಭವಿಷ್ಯ ಉಜ್ವಲ ಮತ್ತು ಸುಂದರವಾಗಲಿ ಎಂದು ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಆರ್.ಕಾಮತ್ ಹಾರೈಸಿದರು.
ಈ ಸಂದರ್ಭ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಯನ್ನು ಮಾಡಿದ ಶ್ರೀಮತಿ ವಿದ್ಯಾ ಯು. ಶೆಟ್ಟಿಯವರು ಗುರುದೇವರಿಂದ ಸಮ್ಮಾನಿತರಾದರು.









